Published On: Tue, May 19th, 2020

ರಾಜ್ಯ ಸರಕಾರದಿಂದ ಕ್ಷೌರದಂಗಡಿಗಳನ್ನು ಪುನರಾರಂಭಿಸಲು ಅನುಮತಿ

ಮಂಗಳೂರು:ಕೊರೊನಾ ರೋಗದಿಂದ ಬರೊಬ್ಬರಿ ಇಂದಿಗೆ 59 ದಿವಸಗಳ ಕಾಲ ನಮ್ಮ ಕ್ಷೌರದಂಗಡಿಗಳನ್ನು ಮುಚ್ಚಿ ಈ ಅವಧಿಯಲ್ಲಿ ಅನೇಕ ಕ್ಷೌರಿಕ ಕುಟುಂಬಗಳಿಗೆ ದಿನದೂಡುವುದೇ ಕಷ್ಟ ಸಾಧ್ಯವಾಗಿತ್ತು. ಸರಕಾರದಿಂದ ಸ್ಥಳೀಯ ಶಾಸಕರ ಮೂಲಕ ರಾಜ್ಯ ಸಮಿತಿಯಿಂದ, ಜಿಲ್ಲಾ ಸಮಿತಿಯಿಂದ, ತಾಲೂಕು ಸಮಿತಿಯಿಂದ ಮತ್ತು ವಲಯ ಸಮಿತಿಗಳಿಂದ ಅಗತ್ಯವಿದ್ದವರಿಗೆ ಸಹಾಯ ನೀಡುವ ಕೆಲಸ ನಡೆದಿದೆ. ಈ ಕಠಿಣ ಸಂದರ್ಭದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದ ಪ್ರತಿಯೋರ್ವರಿಗೂ ದ.ಕ.ಜಿಲ್ಲಾ ಸವಿತಾ ಸಮಾಜದ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ

ಹಾಗೆಯೇ  ರಾಜ್ಯ ಸರಕಾರ ಹೊರಡಿಸಿದ ಹೊಸ ಮಾರ್ಗ ಸೂಚಿಯಂತೆ ಕ್ಷೌರದಂಗಡಿಗಳನ್ನು ಪುನರಾರಂಭಿಸಲು ಅನುಮತಿ ನೀಡಿದೆ. ಸಂಸದ ಹಾಗು ಮಾನ್ಯ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿಗಳಿಂದ  ಅನುಮತಿಯನ್ನು ಪಡೆದು ಮೇ20 ರಂದು ಬುಧವಾರದಿಂದ ಕ್ಷೌರದಂಗಡಿಗಳನ್ನು ಪುನರಾರಂಭಗೊಳ್ಳಲಿದೆ.

ಕೊರೊನಾ ರೋಗ ಜಗತ್ತಿನಿಂದಲೇ ದೂರವಾಗಳು  ಈ ಕೆಳಗಿನ ಸೂಚನೆಗಳನ್ನು ತಪ್ಪದೆ ಪಾಲಿಸೋಣ.

• ದಿನದ ಮೊದಲು ಅಂಗಡಿಯ ಎಲ್ಲಾ ಕುರ್ಚಿ, ಇನ್ನಿತರ ಸಂಬಂಧಪಟ್ಟ ಎಲ್ಲಾ ವಸ್ತುಗಳನ್ನು ಸ್ಯಾನಿಟೈಸ್ ಮಾಡುವುದು.

• ಕಡ್ಡಾಯವಾಗಿ ಮೂಗು, ಬಾಯಿಯನ್ನು ಮಾಸ್ಕ್ ನಿಂದ ಮುಚ್ಚಿಕೊಳ್ಳಿ. ಕಣ್ಣುಗಳಿಗೆ ಕನ್ನಡಕಗಳನ್ನು ಧರಿಸಿರಿ.

• ಸಾಧ್ಯವಾದಷ್ಟು ಮಟ್ಟಿಗೆ Use & throw ಗ್ಲೌಸ್ ಧರಿಸಿ ಕೆಲಸ ನಿರ್ವಹಿಸಿರಿ.

• ಗ್ರಾಹಕನು ಅಂಗಡಿಯ ಒಳಗೆ ಪ್ರವೇಶಿಸುವಾಗ ಕೈಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸುವುದು.

• ಅಂಗಡಿಯೊಳಗೆ ಒಮ್ಮೆ ಇಬ್ಬರು ಗ್ರಾಹಕರಿಗೆ ಮಾತ್ರ ಅವಕಾಶವಿರಲಿ

• ಎರಡು ಕುರ್ಚಿಗಳ ಮಧ್ಯೆ ಕನಿಷ್ಠ 5 ಅಡಿಗಳ ಅಂತರವಿರಲಿ.

• ಒಬ್ಬ ಗ್ರಾಹಕರಿಗೆ ಉಪಯೋಗಿಸಿದ ಬಟ್ಟೆಗಳನ್ನು ಒಗೆದ ನಂತರವೇ ಮತ್ತೊಬ್ಬರಿಗೆ ಉಪಯೋಗಿಸುವುದು, ಅಂದರೆ ಹೆಚ್ಚು ಬಟ್ಟೆಗಳನ್ನು ತಂದಿಡಬೇಕಾಗುವುದು. ಅಥವಾ Use & throw ಬಟ್ಟೆಗಳನ್ನು ಉಪಯೋಗಿಸುವುದು

• ಪ್ರತಿ ಬಾರಿಯು ಕೈಗಳನ್ನು ಸಾಬೂನಿನಿಂದ ತೊಳೆಯಿರಿ

• ಸಾಧ್ಯವಾದಷ್ಟು ಮಟ್ಟಿಗೆ ಉದ್ದ ತೋಳುಗಳುಳ್ಳ ಶರ್ಟ್ ಧರಿಸುವುದು ಅಥವಾ ಏಫ್ರಾನ್ ಧರಿಸುವುದು.

• ಒಬ್ಬ ಗ್ರಾಹಕನ ಕ್ಷೌರ ಮಾಡಿದ ನಂತರ ಇನ್ನೊರ್ವ ಗ್ರಾಹಕನ ಕ್ಷೌರ ಪ್ರಾರಂಭಿಸುವ ಮುಂಚೆ ಕುರ್ಚಿ ಸಹಿತ ಉಪಯೋಗಿಸಿದ ಎಲ್ಲಾ ವಸ್ತುಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಿರಿ.

• ಕೆಲಸಕ್ಕೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಟೇಬಲ್ ನ ಮೇಲಿಡುವುದು.

• ತಂತಮ್ಮ ಮನೆಗಳಿಗೆ ದಿನದ ಕೆಲಸ ಮುಗಿಸಿದ ಮೇಲೆ ಶುಚಿರ್ಭೂತರಾಗಿ ಮನೆಯೊಳಗೆ ಪ್ರವೇಶಿಸಿ, ಪದೇ ಪದೇ ಮನೆಗೆ ಪ್ರವೇಶಿಸದೆ ಕುಟುಂಬದ ಸದಸ್ಯರನ್ನು ಸೋಂಕಿನಿಂದ ರಕ್ಷಿಸಿ.

• ಹವಾ ನಿಯಂತ್ರಣ ವ್ಯವಸ್ಥೆಯನ್ನು ಉಪಯೊಗಿಸದಿರಿ.

• ಇಷ್ಟರವರೆಗೆ ಗ್ರಾಹಕರ ಮನೆಗೆ ಹೋಗಿ ಕೆಲಸ ನಿರ್ವಹಿಸುತ್ತಿದ್ದವರು ತಕ್ಷಣದಿಂದಲೇ ಆ ಅಭ್ಯಾಸವನ್ನು ನಿಲ್ಲಿಸುವುದು,
ಆ ಮೂಲಕ ಈ ಭಯನಕ ಸೋಂಕಿನಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳುವ.

• ಕೆಲಸದ ಸಮಯ ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ಮಾತ್ರ

• ಸದ್ಯದ ಮಟ್ಟಿಗೆ ಆದಿತ್ಯವಾರವೇ ವಾರದ ರಜೆಯೆಂದು ಪರಿಗಣಿಸುವುದು.

• ಕಡ್ಡಾಯವಾಗಿ COVID 19 ಬಗ್ಗೆ ಸರಕಾರ ಸೂಚಿಸಿದ ನಿಯಮಗಳನ್ನು ಪಾಲಿಸುವುದು.

• ಕಡ್ಡಾಯವಾಗಿ ಭಾರತ ಸರಕಾರದ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿ ಅಗತ್ಯ ಮಾಹಿತಿಗಳನ್ನು ತುಂಬಿಸುವುದು.  

ಎಂದು ದ.ಕ.ಜಿಲ್ಲಾ ಸವಿತಾ ಸಮಾಜ ಮಂಗಳೂರು  ಇದರ ಅಧ್ಯಕ್ಷ ಆನಂದ ಭಂಡಾರಿ ಪ್ರಧಾನ ಕಾರ್ಯದರ್ಶಿ ವಸಂತ ಎಂ. ಬೆಳ್ಳೂರು ತಿಳಿಸಿದ್ದಾರೆ.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter