ಕೈಕಂಬ: ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ಗುರುಪುರ ಉಪ-ವಿಭಾಗದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸುನಿತಾ ಗಾಂವ್ಕರ್ ಕಳೆದ 15 ವರ್ಷದಿಂದ ಗುರುಪುರ, ಅಡ್ಡೂರು, ತೆಂಕುಳಿಪಾಡಿ, ಗಂಜಿಮಠ ವ್ಯಾಪ್ತಿಯಲ್ಲಿ ದಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶಪ್ರೇಮ ಮತ್ತು ಪರಿಸರ ಸ್ವಚ್ಚತೆಯೊಂದಿಗೆ ಆರೋಗ್ಯದ ಪಾಠ ಹೇಳುವ ಈಕೆ ಎಲ್ಲ ಸಮುದಾಯದ ಮಂದಿಯ ಪ್ರೀತಿಗೆ ಪಾತ್ರರಾಗಿದ್ದಾರೆ.gur-may-10-sunitha-2

2024ರಲ್ಲಿ ನಿವೃತ್ತಿ ಹೊಂದಲಿರುªವಿದುವರೆಗೆ 32 ವರ್ಷ ಸೇವೆ ಸಲ್ಲಿಸಿರುವ ಸುನಿತಾರು ಮೊದಲಿಗೆ ಪಡುಬಿದ್ರಿಯಲ್ಲಿ, ಬಳಿಕ ನಕ್ಸಲೈಟ್ ಪ್ರದೇಶವಾದ ಕುದುರೆಮುಖ, ಕಳಸ, ಚಿಕ್ಕಮಗಳೂರು, ಉಡುಪಿ ಹಾಗೂ ರಾಯಚೂರು, ಬಳ್ಳಾರಿಯಲ್ಲಿ ಸರ್ಕಾರಿ ಸೇವೆ ಸಲ್ಲಿಸಿರುವ ಈಕೆ, ಹಿಂದಿನ ಕಾಲದ ಕಠಿಣ ಪರಿಸ್ಥಿತಿಯಲ್ಲಿ ಸುಲಲಿತ(ಹೆರಿಗೆ ಮಾಡಿಸುವುದು) ಕಾರ್ಯ ನಿರ್ವಹಿಸಲಾಗಿದ್ದರೂ, ಕೊರೊನಾ ಮಹಾಮಾರಿಯ ಹರಡಿರುವ ಈ ಸೂಕ್ಷ್ಮ ಸಂದರ್ಭದಲ್ಲಿ ವಯಸ್ಸು ಲೆಕ್ಕಿಸದೆ ಗ್ರಾಮೀಣ ಪ್ರದೇಶಗಳಲ್ಲಿ ಜನಜಾಗೃತಿಗಾಗಿ ಅವಿತರ ಶ್ರಮಿಸಿದ್ದಾರೆ.

ಪ್ರಸಕ್ತ ಸಂದರ್ಭದಲ್ಲಿ ನನ್ನ ಬಳಗಕ್ಕೆ ಒಂದು ಕಹಿ ಅನುಭವವಾಗಿದ್ದರೂ ಉಳಿದಂತೆ ಎಲ್ಲೆಡೆ ನಾವು ಮಾಡುವ ಕೆಲಸ ಮನುಕುಲದ ಸೇವೆ ಎಂದು ಭಾವಿಸಿದ್ದಾರೆ. ಇದಕ್ಕೆ ಇಲ್ಲಿನವರ ಶಿಕ್ಷಣ ಮಟ್ಟ ಕಾರಣವಾಗಿದೆ. `ದೇಶ ಮೊದಲು, ಬಳಿಕ ನಾವು ನಮ್ಮ ಕುಟುಂಬ’ ಎಂಬ ಭಾವನೆಯೊಂದಿಗೆ ಪರಿಸರ ಸ್ವಚ್ಚವಾಗಿಡಬೇಕು ಹಾಗೂ ಮುಂದಿನ ಪೀಳಿಗೆಯ ಬಗ್ಗೆ ಒಂದಷ್ಟು ಕಾಳಜಿ, ಇಚ್ಛಾಶಕ್ತಿ ಹರಿಸಬೇಕೆಂಬ ಪಾಠ ಕಲಿಸಿಕೊಟ್ಟಿದೆ ಈ ಕೊರೊನಾ. ಇಂದಿನ ಸುಶಿಕ್ಷಿತ ಸಮಾಜದಲ್ಲಿ ಮಾಹಿತಿ ಕೊರತೆ ಇಲ್ಲ. ಎಲ್ಲರಿಗೂ ಮೊಬೈಲ್ ಬಳಕೆಯನ್ನು ಹೇಗೆ ತನ್ನಿಂದ ತಾನೇ ಕಲಿತುಕೊಳ್ಳುತ್ತಾರೋ ಹಾಗೆಯೇ ಜೀವನದಲ್ಲಿ ಒಂದಷ್ಟು ನಮ್ಮ ಹಳೆಯ ಸಂಸ್ಕಾರ/ಶಿಷ್ಟಾಚಾರ ಮೈಗೂಡಿಸಿಕೊಂಡರೆ ಖಂಡಿತಾ ಎಲ್ಲರ ಆರೋಗ್ಯ ಸುಗಮವಾಗಲಿದೆ. ಆಗ ಕೊರೋನಾ ಅಥವಾ ಇತರ ಯಾವುದೇ ಸಾಂಕ್ರಾಮಿಕ ರೋಗ ಹಿಮ್ಮೆಟ್ಟಿಸಬಹುದು.

ಸುನಿತಾ ಗಾಂವ್ಕರ್

ಕಿರಿಯ ಮಹಿಳಾ ಆರೋಗ್ಯ ಸಹಾಯಕಿ

ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ಗುರುಪುರ ಉಪಕೇಂದ್ರ

By suddi9

Leave a Reply

Your email address will not be published. Required fields are marked *