ಬಂಟ್ವಾಳ ತಾಲೂಕಿನ ರಾಯಿ ಸಕಾ೯ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನ ವಿರುದ್ಧ ಹೋರಾಡುತ್ತಿರುವ ಎಲ್ಲಾ ಸಿಬ್ಬಂದಿಳು ಮತ್ತು ಆಶಾ ಕಾರ್ಯಕರ್ತೆಯರಿಗೆ ಜಿ.ಎಚ್.ಎಂ.ಫೌಂಡೇಶನ್ ಸಲಹೆಗಾರ, ಅರಳ ಗ್ರಾ.ಪಂ.ಸದಸ್ಯ ಎಂ.ಬಿ.ಆಶ್ರಫ್ ಮತ್ತು ಎಂಡೋಸಲ್ಫಾನ್ ಸೆಲ್ ಜಿಲ್ಲಾ ಸಂಯೋಜಕ ಸಜೀಯುದ್ದೀನ್ ಎಂ.ಎಸ್. ಇವರು ಉಚಿತ ಅಕ್ಕಿ ಮತ್ತು ದಿನಸಿ ಸಾಮಗ್ರಿ ಕಿಟ್ ಭಾನುವಾರ ವಿತರಿಸಿದರು. ಪ್ರಯೋಗಾಲಯ ತಂತ್ರಜ್ಞ ಬಸವರಾಜ್ ಮತ್ತಿತರರು ಇದ್ದರು.
