ಬಂಟ್ವಾಳ:   ದ್ವಿತೀಯ ಹಂತದಲ್ಲಿ ಬಂಟ್ವಾಳದಲ್ಲಿರುವ 27 ಜಿಲ್ಲೆಗಳ 353 ವಲಸೆ ಕಾರ್ಮಿಕರನ್ನು ಸೋಮವಾರ ರಾತ್ರಿ ಬಿ.ಸಿ.ರೋಡಿನ ಕೆಎಸ್ ಆರ್ ಟಿಸಿ ಬಸ್ ನಿಲಗದಾಣದಿಂದ ಬೀಳ್ಕೊಡಲಾಯಿತು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ತಾಲೂಕು ಆಡಳಿತದ ಸಹಯೋಗದೊಂದಿಗೆ 15 ಬಸ್ಸುಗಳಲ್ಲಿ  ಕಾರ್ಮಿಕರನ್ನು ಅವರವರ ಊರಿಗೆ ಕಳಿಸಿಕೊಡಲಾಯಿತು.

IMG-20200504-WA0070ಈ ಸಂದರ್ಭದಲ್ಲಿ ಕಾರ್ಮಿಕರಿಗೆ ಶಾಸಕರು ವೈಯುಕ್ತಿಕ ನೆಲೆಯಲ್ಲಿ  ಊಟೋಪಚಾರದ ವ್ಯವಸ್ಥೆಯನ್ನು ಮಾಡಿದರು. ತಹಶೀಲ್ದಾರ್ ರಶ್ಮೀ ಎಸ್.ಆರ್.,ಆರೋಗ್ಯಾಧಿಕಾರಿ ಡಾ.ದಿಒಪಾ ಪ್ರಭು,ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪುರುಷೋತ್ತಮ ಶೆಟ್ಟಿ ವಾಮದಪದವು,ವಜ್ರನಾಭ ಕಲ್ಲಡ್ಕ ಮೊದಲಾದವರಿದ್ದರು. ಕಳೆದವಾರ ಸುಮಾರು 600 ಕ್ಕು ಅಧಿಕ ಮಂದಿ ಕಾರ್ಮಿಕರನ್ನು ಇಲ್ಲಿಂದ ಕಳುಹಿಸಿಕೊಡಲಾಗಿತ್ತು.

By suddi9

Leave a Reply

Your email address will not be published. Required fields are marked *