ಪುತ್ತೂರು: ಕೇಂದ್ರದ ರೈಲ್ವೇ ಸಚಿವ, ಬಿಜೆಪಿ ಮುಖಂಡ ಡಿ.ವಿ.ಸದಾನಂದ ಗೌಡ ಅವರ ಸಹೋದರಿ, ಬೆಳಂದೂರು ಜಿಲ್ಲಾ ಪಂಚಾಯತ್ ಸದಸ್ಯೆ ಸಾವಿತ್ರಿ ಶಿವರಾಮ್ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.
Savithri Shivaram (1)

ಪುತ್ತೂರಿನ ಈಶ್ವರಮಂಗಲದ ನಿವಾಸಿಯಾಗಿರುವ ಇವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಂಗಳವಾರ ಮುಂಜಾನೆ ಇವರು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ಪಾಥರ್ಿವ ಶರೀರವನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಯಿತು. ಸಹೋದರನಂತೆ, ಸಹೋದರಿ ಸಾವಿತ್ರಿ ಕೂಡಾ ರಾಜಕೀಯದಲ್ಲಿ ಬಹಳಷ್ಟು ಆಸಕ್ತಿ ಹೊಂದಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.”

By suddi9

Leave a Reply

Your email address will not be published. Required fields are marked *