ಬಂಟ್ವಾಳ: ಕೊರೋನ ಸೋಂಕಿಗೆ ಕಳೆದೊಂದು ವಾರದಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬಂಟ್ವಾಳ ಕಸ್ಬಾ ಗ್ರಾಮದ 69 ರ ಹರೆಯದ ವೃದ್ದೆ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ  ಹಿನ್ನಲೆಯಲ್ಲಿ ಬಂಟ್ವಾಳ ಪುರವಾಸಿಗಳಲ್ಲಿ ಆತಂಕವನ್ನು ಹೆಚ್ಚಿಸಿದ್ದು,ಶುಕ್ರವಾರ ಸ್ಮಶಾನಮೌನ ಅವರಿಸಿತ್ತು. ಕಳೆದೊಂದು ವಾರದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೆಟರ್ ಅಳವಡಿಸಿ ಚಿಕಿತ್ಸೆ ಪಡೆಯಿತ್ತಿದ್ದ ವೃದ್ದೆ ಗುರುವಾರ ಸಂಜೆ ಮೃತಪಟ್ಟಿರುವುದನ್ನು ಜಿಲ್ಲಾಡಳಿತ ದೃಢ ಪಡಿಸಿದ ಬಳಿಕ ಬಂಟ್ವಾಳ ಪರಿಸರ ಜನರಲ್ಲಿ ಆತಂಕವನ್ನು ಹೆಚ್ಚಿಸುವಂತೆ ಮಾಡಿದೆ. ಇವರ ಪುತ್ರಿಗೂ ಕೊರೋನ ಸೋಂಕು ದೃಢಪಟ್ಟು ಸದ್ಯ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.IMG_20200429_111408
ಇವರ ಗಂಡ,ಪುತ್ರ ಸಹಿತ ಮನೆ ಮಂದಿ ಎನ್ ಐಟಿಕೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ.ಇವರ ಪಕ್ಕದ ಮನೆಯ,ಸಂಬಂಧಿಗಳಾದ ಸೊಸೆ,ಅತ್ತೆ ಸಾವನ್ನಪ್ಪಿದ್ದು, ಏ.19 ರಂದು ಮೃತಪಟ್ಟ ಮಹಿಳೆಯ ಸಂಪರ್ಕದಿಂದ ಇವರಿಗೆ ಸೋಂಕು ತಗಲಿತ್ತು.ಇದೀಗ ಈ ವೃದ್ದೆಯು ಮೃತರಾಗುವುದರೊಂದಿಗೆ ಒಂದೇ ಪರಿಸರದ ಅಕ್ಕಪಕ್ಕದ ಮನೆಯ, ಪರಸ್ಪರ ಸಂಬಂಧಿಕರು ಕೂಡ ಅಗಿದ್ದಾರೆ.  ಈಗಾಗಲೇ ಬಂಟ್ವಾಳ ರಥಬೀದಿಯನ್ನು ಸಂಪೂರ್ಣಸೀಲ್ ಡೌನ್ ಗೊಳಪಡಿಸಿ ಕಂಟೈನ್ಮಂಟ್ ವಲಯವನ್ನಾಗಿ ಗುರುತಿಸಲಾಗಿದೆ.
ಪುರಸಭೆಯಲ್ಲಿ ನಾಗರಿಕರಿಗೆ ಸಹಾಯವಾಣಿ ತೆರೆದು ಸ್ವಯಂಸೇವಕರ ಮೂಲಕ ಅಗತ್ಯವಸ್ತು ಪೂರೈಸಲಾಗುತ್ತಿದೆ.ಶುಕ್ರವಾರ ಪೋಲಿಸ್ ಬಂದೋಬಸ್ತ್ ನ್ನು ಬಿಗುಗೊಳಿಸಲಾಗಿತ್ತು.ಲಾಕ್ ಡೌನ್ ಪ್ರದೇಶದಲ್ಲಿ ತರಕಾರಿ,ದಿನಸಿ ಅಂಗಡಿ ತೆರೆದಿದ್ದರೂ ಜನರ ಸಂಚಾರ ಅತ್ಯಂತ ವಿರಳವಾಗಿದ್ದರಿಂದ ವ್ಯವಹಾರ ಕೂಡ ಅಷ್ಟಕಷ್ಟೆ ಆಗಿತ್ತು ಎಂದು ಅಂಗಡಿ ಮಾಲಕರು ತಿಳಿಸಿದ್ದಾರೆ.ಸುಮಾರು 11 ಗಂಟೆಯ ವೇಳೆಗಾಗಲೇ ಲಾಲ್ ಡೌನ್ ಪ್ರದೇಶ ಜನ,ವಾಜನ ಸಂಚಾರವಿಲ್ಲದೆ ಬಿಕೋ ಅನಿಸಿತು. ಒಂದೇ ವಠಾರದ ಅಕ್ಕಪಕ್ಕದ ನಿವಾಸಿಗಳು,ಪರಸ್ಪರ ಹತ್ತಿರದ ಸಂಬಂಧಿಗಳಾದ ಮೂವರು ಕೊರೋನ ಸೋಂಕಿಗೆ ಬಲಿಯಾಗಿರುವುದು ಸುತ್ತಮುತ್ತಲಿನ  ನಿವಾಸಿಗಳಲ್ಲಿ ಮತ್ತು ಅವರವಕುಟುಂಬದಲ್ಲು ಅರಗಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.
ಮಾದರಿ ಪರೀಕ್ಷೆ:
ಬಂಟ್ವಾಳ ಕಂಟೈನ್ಮಂಟ್ ವಲಯದಲ್ಲಿ  ಮಾದರಿ ಸಂಗ್ರಹ ಕಾರ್ಯವು   ಈಗಾಗಲೇ  ಪೂರ್ಣಗೊಂಡಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಈ ಭಾಗದ ಸುಮಾರು. 4೦೦ ಕ್ಕು ಅಧಿಕ ಮಂದಿಯ ಮಾದರಿ ಸಂಗ್ರಹ ಮಾಡಿದ್ದಾರೆ.

By Suddi9

Leave a Reply

Your email address will not be published. Required fields are marked *