ಕೈಕಂಬ:ಅಡ್ಡೂರು ಕಾಂಜಿಲಕೋಡಿ ರೈಡರ್ಸ್ ಫ್ರೆಂಡ್ಸ್ ವತಿಯಿಂದ ಅಡ್ಡೂರು ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಹಾಗೂ ಕಿಟ್ ವಿತರಣೆಯು ಶುಕ್ರವಾರ ನಡೆಯಿತು. ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಆಸುಪಾಸಿನಲ್ಲಿ ಕಾರ್ಯಾಚರಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗಮನಿಸಿದ ರೈಡರ್ಸ್ ಫ್ರೆಂಡ್ಸ್ ಕಾಂಜಿಲಕೋಡಿ ಇದರ ಸದಸ್ಯರು ಆಶಾ ಕಾರ್ಯಕರ್ತೆಯರ ಸೇವೆಯನ್ನು ಸ್ಮರಿಸುವುದರ ಮೂಲಕ ಅವರನ್ನು ಸನ್ಮಾನಿಸಿ ಅಗತ್ಯ ದಿನಸಿ ಸಾಮಾನುಗಳನ್ನು ನೀಡಿದರು.
ರೈಡರ್ಸ್ ಫ್ರೆಂಡ್ಸ್ ಅಧ್ಯಕ್ಷ ಸುಭಾಶ್ ಚಂದ್ರ ಅವರ ಮನೆಯ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶಾ ಸುಗಮಕಾರರಾದ ಜಯಲಕ್ಷ್ಮಿ ಸುಭಾಶ್ ಚಂದ್ರ ಮತ್ತು ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಸಿಂತ್ಯ ಡಿ ಸೌಜ,ಶ್ರೀಮತಿ ಸುಗಂಧಿ,ಶ್ರೀಮತಿ ತುಳಸಿ, ಶ್ರೀಮತಿ ಸುಜಾತಾ ಮತ್ತು ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ನಿಶಾ ರವರನ್ನು ಸನ್ಮಾನಿಸುವುದರ ಮೂಲಕ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಸಚಿನ್ ಅಡಪ,ಗುರುಪುರ ಗ್ರಾಮ ಪಂ.ಅಧ್ಯಕ್ಷೆ ರುಕಿಯ, ಬದ್ರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಎಮ್.ಎ.ಅಹ್ಮದ್ ಬಾವ, ಗ್ರಾಮ ಪಂ.ಸದಸ್ಯರಾ ದ,ಯಶವಂತ್ ಶೆಟ್ಟಿ,ಹರಿಶ್ಚಂದ್ರ ಅಮೀನ್,ಎ.ಕೆ.ರಿಯಾಝ್, ಎ.ಕೆ.ಅಶ್ರಫ್ ಹಾಗೂ ಹಸನ್ ಬಾವ, ಝಕರಿಯಾ ಹಾಜಿ,ಎಮ್.ಎಚ್.ಸಾಹುಲ್ ಹಮೀದ್, ನಝೀರ್ ನೂಯಿ,ಇಮ್ರಾನ್ ಅಡ್ಡೂರು,ಎಮ್.ಎಸ್.ಶೇಖ್ ಮೋನು,ವಿಶ್ವೇಶ್ವರ ಭಟ್, ನಿತಿನ್ ಹಾಗೂ ರೈಡರ್ಸ್ ಫ್ರೆಂಡ್ಸ್ ಇದರ ಸರ್ವ ಸದಸ್ಯರು ಮತ್ತು ಮುಂತಾದ ಹಲವು ಗಣ್ಯರು ಉಪಸ್ಥಿತರಿದ್ದರು.








