ಕುಪ್ಪೆಪದವು: ಇಲ್ಲಿನ ನೆಲ್ಲಿಜೋರ ಗುಡ್ಡಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ಆರಿಸಿತು. ಎಡಪದವು -ಕುಪ್ಪೆಪದವು ರಸ್ತೆಯ ಮಾಣಿಪಳ್ಳ ಬಳಿ ಇರುವ ಗುಡ್ಡದಲ್ಲಿ ಸಂಜೆ ಸುಮಾರು 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಪ್ಪೆಪದವು ಪಿಡಿಓ ಸವಿತಾ ಮಂದೋಳಿಕರ್ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದರು. ಈ ಗುಡ್ಡದ ಒಂದು ಬದಿಯಲ್ಲಿ ರಸ್ತೆ ಇದ್ದು, ಗುಡ್ಡದ ಎರಡು ಬದಿಯಲ್ಲಿ ಜನವಸತಿ ಪ್ರದೇಶವಿದೆ, ಗುಡ್ಡದ  ಅಂಚಿನಲ್ಲಿರುವ ವಸತಿ ಪ್ರದೇಶಕ್ಕೆ ಬೆಂಕಿ ಹರಡಿದ್ದರೆ ಹಲವು ಮನೆಗಳಿಗೆ ಅಪಾಯ ಉಂಟಾಗುತ್ತಿತ್ತು. 20200504_182226

ಇಲ್ಲಿನ ಈ ಗುಡ್ಡದಲ್ಲಿ ರಬ್ಬರ್ ತೋಟಗಳಲ್ಲಿ ಹಾಕುವ ಮುಚ್ಚಿಲ್ ಎಂಬ ಬಳ್ಳಿ ಹಬ್ಬಿದ್ದು, ಪ್ರತೀ ವರ್ಷ ಇದಕ್ಕೆ ಬೆಂಕಿ ಹಚ್ಚಲಾಗುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ. ಪ್ರತೀ ವರ್ಷ ಯಾರೋ ಕಿಡಿಗೇಡಿಗಳು  ಬೆಂಕಿ ಹಚ್ಚಿ ಪರಾರಿಯಾಗುತ್ತಾರೆ ಎಂದು ಸ್ಥಳೀಯರ ಆರೋಪ ವಾಗಿದೆ. 20200504_182119

By suddi9

Leave a Reply

Your email address will not be published. Required fields are marked *