ಬಂಟ್ವಾಳ: ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಮಾಡಿರುವ ಲಾಕ್ ಡೌನ್ ನಿಂದ ಹಾಲು ಉತ್ಪಾದಕರಿಗೆ ಆರ್ಥಿಕ ಸಂಕಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಬೋಳಂತೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಲು ಹಾಕುವ ಪ್ರತೀ ಸದಸ್ಯರು, ಸಿಬ್ಬಂದಿಗಳು,ಸ್ಥಳೀಯ ಆಶಾ ಕಾರ್ಯಕರ್ತೆಯರಿಗೆ ದಿನಬಳಕೆ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಹಾಗೆಯೇ 2019 – 20 ನೇ ಸಾಲಿನಲ್ಲಿ ಸಂಘಕ್ಕೆ ಹಾಲು ಹಾಕಿದ ಪ್ರತೀ ಸದಸ್ಯರಿಗೆ ಪ್ರತಿ ಲೀಟರ್ ಮೇಲೆ 75 ಪೈಸೆಯಂತೆ ಒಟ್ಟು 1,49,508 ಪ್ರೋತ್ಸಾಹ ಧನ ಘೊಷಿಸಿ ಮೊತ್ತವನ್ನು ಸದಸ್ಯರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಯಿತು .
ಸೋಮವಾರ ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ, ದ.ಕ. ಹಾಲು ಒಕ್ಕೂಟದ ನಿರ್ದೇಶಕರಾದ ಬಿ.ಸುಧಾಕರ ರೈ ಸಾಂಕೇತಿಕ ವಿತರಿಸಿದರು .ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ ,ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಎಸ್ ಪ್ರಬಾಕರ್ ,ವಿಸ್ತರಣಾಧಿಕಾರಿ ದೇವರಾಜ್ ,ಜಗದೀಶ ಕಾರ್ಯದರ್ಶಿ ವಿಶ್ವನಾಥ, ಸಂಘದ ನಿರ್ದೇಶಕರು ಉಪಸ್ತಿತರಿದ್ದರು.
