ಬಂಟ್ವಾಳ: ಒಂದೆಡೆ ಕೋವಿಡ್-೧೯ ನ ಭಯವಾದರೆ,ಇದೀಗ ಬಂಟ್ವಾಳ- ಬೆಳ್ತಂಗಡಿ ರಾ.ಹೆ.ಯ ಮೂರ್ಜೆಯಲ್ಲಿ ಚಿರತೆಯೊಂದು ರಾಜರಸ್ತೆ ಅಡ್ಡಾ ಡುತ್ತಿರವುದು ಸ್ಥಳೀಯ ಜನರಲ್ಲಿ ಮತ್ತೊಂದು ಭಯವನ್ನುಟ್ಟಿಸಿದೆ. ಮೂರ್ಜೆಯ ರಸ್ತೆ,ಸ್ಥಳೀಯ ಗ್ರಾಪಂ ಸದಸ್ಯೆಯೊಬ್ಬರ ಮನೆಂಗಳದ ಮೂಲಕ ಗುಡ್ಡಕ್ಕೆ ಹಾದುಹೋಗಿರುವುದು ಇಲ್ಲಿನ ಗ್ರಾಮಸಹಾಯಕ ಸಂತೋಷ್ ಅವರ ಮನೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.download (1)

ರವಿವಾರ ರಾತ್ರಿವೇಳೆ ಚಿರತೆ ರಸ್ತೆಯಲ್ಲಿ ದಾಪುಗಾಲಿಡುತ್ತಾ ಗ್ರಾಪಂ ಸದಸ್ಯೆ ವಸಂತಿಯವರ ಮನೆಯಂಗಳದಲ್ಲಿ ಕಾಣಿಸಿಕೊಂಡಿದೆ.ಬಳಿಕ ಗುಡ್ಡದಾಚೆ ತೆರಳಿದೆ.ರಸ್ತೆಯಲ್ಲಿ ಚಿರತೆಯ ರಾಜಗಾಂಭಿರ್ಯದ ನಡೆಯನ್ನು ಪ್ರತ್ಯಕ್ಷವಾಗಿ ಕಂಡು ಭಯಭೀತರಾಗಿದ್ದಾರೆ.ಸೋಮವಾರ ವೇಣೂರು ಅರಣ್ಯಾಧಿಕಾರಿಯವರಿಗೆ ಜಿಪಂ ಸದಸ್ಯ ತುಂಗಪ್ಪ ಬಂಗೇರರ ಮೂಲಕ ಮಾಹಿತಿ ನೀಡಿದ್ದಾರೆ.

ಅರಣ್ಯಾಧಿಕಾರಿ ಸುನೀಲ್ ಕುಮಾರ್ ಮತ್ತವರ ಸಿಬ್ಬಂದಿಗಳು ಸ್ಥಳಕಾಗಮಿಸಿ ಸಿಸಿಕ್ಯಾಮರದಲ್ಲಿ ಸೆರೆಯಾಗಿರುವ ಚಿರತೆಯ ನಡೆಯ ದೃಶ್ಯವನ್ನು ಪರಿಶೀಲಿಸಿದ್ದಾರೆ,ಬಳಿಕ ಗುಡ್ಡಗಾಡಿನಲ್ಲಿ ಹುಡುಕಾಡಿದರೂ ಅದರ ಸುಳಿವು ಸಿಕ್ಕಿಲ್ಲ.ಸಂಜೆಯ ಹೊತ್ತಿನಲ್ಲಿ ಈಗ ಜನ,ವಾಹನ ಸಂಚಾರವಿಲ್ಲದರಿಂದ ಚಿರತೆ ರಸ್ತೆಯಲ್ಲಿ ನಿರಾಳವಾಗಿ ಸಂಚರಿಸಿದೆ.ತೋಟವೊಂದರ ಕೆರೆಯಲ್ಲಿ ನೀರು ಕುಡಿದು ತನ್ನ ಬಾಯಾರಿಕೆಯನ್ನು ಈಡೇರಿಸಿದು ಕುರುಹ ಕಂಡುಬಂದಿದ್ದು,ಆಸ್ಥಳದಲ್ಲಿ ಚಿರತೆಯ ಬಲೆಗೆ ಹಾಕುವ ನಿಟ್ಟಿನಲ್ಲಿ ಬೋನನ್ನು ಇರಿಸಲಾಗುವುದು ಎಂದು ಅರಣ್ಯಾಧಿಕಾರಿಯವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *