ಬಂಟ್ವಾಳ: ತಾಲೂಕಿನ ಮಾರ್ನಬೈಲು ಸಮೀಪದ ಕಾರಾಜೆ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಕಾನೆಗೆ ಬುಧವಾರ ಬಂಟ್ವಾಳ ನಗರ ಠಾಣಾ ಪೋಲಿಸರು ದಾಳಿ ನಡೆಸಿ ಸಾಗಟಕ್ಕೆ ಸಿದ್ದಪಡಿಸಿಟ್ಟಿದ್ದ ಗೋಮಾಂಸ ಸಹಿತ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯ ವೇಳೆ ಆರೋಪಿಗಳು ಪರಾರಿಯಾಗಿದ್ದು,ಸ್ಥಳದಲ್ಲಿದ್ದ ಸುಮಾರು 40 ಕೆ.ಜಿ.ಗೋಮಾಂಸ, ನಾಲ್ಕು ಬೈಕ್,ತಲಾ ಒಂದು ಕಾರು ಹಾಗೂ ರಿಕ್ಷಾ ವನ್ನು ಪೋಲಿಸರು ವಶಕ್ಕೆ ಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಮಾರ್ನಬೈಲು ಸಮೀಪದ ಕಾರಾಜೆಯ ಮನೆಯೊಂದರಲ್ಲಿ ಹಲವು ಸಮಯದಿಂದ ಅಕ್ರಮ ಕಸಾಯಿಖಾನೆ ನಡೆಯಿತಿತ್ತು. ಆದರೆ ಈ ಬಗ್ಗೆ ಮಾಹಿತಿ ಇದ್ದರೂ ಬಂಟ್ವಾಳ ಪೋಲೀಸರು ಮಾತ್ರ ಕಾರ್ಯಾಚರಣೆ ನಡೆಸಿರಲಿಲ್ಲ,ಈ ಕುರಿತು ಸ್ಥಳೀಯರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು,ಅವರ ಸೂಚನೆಯಂತೆ ಇದೀಗ ಬಂಟ್ವಾಳ ನಗರ ಪೋಲಿಸ್ ಠಾಣೆಯ ಎಸ್ ಐ ಅವಿನಾಶ್ ,ಅಪರಾಧ ವಿಭಾಗದ ಎಸ್ ಐ ಸಂತೋಷ್ ಮತ್ತವರ ಸಿಬ್ಬಂದಿಗಳು ಈ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿಗಳು ಮನೆಯೊಂದರ ಪಕ್ಕದ ಶೆಡ್ ನಲ್ಲಿ ಗೋವುಗಳನ್ನು ಕಳವುಗೈದು ತಂದು ವಧೆ ಮಾಡಿ ಬಳಿಕ ದ್ವಿಚಕ್ರ ಹಾಗೂ ಆಟೋರಿಕ್ಷಾದಲ್ಲಿ ಮನೆ,ಮನೆಗೆ ತೆರಳಿ ಮಾರಾಟ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ದಾಳಿಯ ವೇಳೆ ಗೋವಧೆಯಲ್ಲಿ ಆರೋಪಿಗಳು ನಿರತರಾಗಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ.ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆಗಿದ್ದರೂ ಅಕ್ರಮ ಕಸಾಯಿಖಾನೆ ಮಾತ್ರ ನಿರಂತರವಾಗಿ ನಡೆಯುತಿತ್ತು ಎಂದು ಆರೋಪಿಸಲಾಗಿದೆ.
ಆರೋಪಿಗಳನ್ನು ಬಂಧಿಸಿ:
ಅಕ್ರಮ ಕಸಾಯಿಖಾನೆ ನಡೆಸುವ ಆರೋಪಿಗಳನ್ನು ತಕ್ಷಣ ಬಂಧಿಸಿ, ಕಠಿಣ ಕಾನೂನು ಕ್ರಮಕೈಗೊಳ್ಳು ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಪೋಲಿಸ್ ಅಧಿಕಾರಿಗಳನ್ನು ಒತ್ತಾಯಿಸಿದೆ.ಕಳೆದ ಹಲವು ಸಮಯದಿಂದ ಕಾರಾಜೆಯಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದರೂ ಬಂಟ್ವಾಳ ಪೋಲೀಸರು ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆಯು ವಿಹಿಪ ಅಸಮಾಧಾನ ವ್ಯಕ್ತಪಡಿಸಿದೆ.
