ಬಂಟ್ವಾಳ: ಇಲ್ಲಿಗೆ ಸಮೀಪದ ಅಮ್ಟೂರು ದೇವಮಾತ ಚರ್ಚ್ ನ ಬಾಗಿಲು ಮುರಿದು ಒಳ ಪ್ರವೇಶಿದ ಕಳ್ಳರು ಹುಂಡಿಯಲ್ಲಿದ್ದ ಹಣ ಕಳವು ಗೈದು ಪರಾರಿಯಾದ ಘಟನೆ ನಡೆದಿದೆ.ಚಚ್೯ ನ ಎಡ ಬದಿಯ ಬಾಗಿಲನ್ನು ಮುರಿದು ಕಳ್ಳರು ಒಳಪ್ರವೇಶಿಸಿ ಒಳಗಡೆ ಮತ್ತು ಹಾಲ್ ಒಳಗೆ ಇದ್ದಂತಹ ಒಟ್ಟು ನಾಲ್ಕು ಹುಂಡಿಗಳನ್ನು ಒಡೆದು ಅದರೊಳಗೆ ಇದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.
ಚರ್ಚ್ ನ ಧರ್ಮಗುರು ಡಾ. ಮಾರ್ಕ್ ಕ್ರಾಸ್ಟಲಿನೊ ಅವರು ನೀಡಿದ ಮಾಹಿತಿಯನ್ವಯ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ ಐ ಸಂರೋಷ್ ಬಿ.ಪಿ.ಮತ್ತವರ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು,ಮುಂದಿನ ತನಿಖೆ ನಡೆಸುತ್ತಿದ್ದಾರೆ.
