ಬಂಟ್ವಾಳ:   ಜಿಲ್ಲೆಯ ಇತಿಹಾಸ   ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಎ.11 ರಿಂದ 16 ರ ವರೆಗೆ ನಡೆಯಲಿರುವ ಸಜೀಪ ಬಿಸು ಜಾತ್ರೆ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.   ಬಂಟ್ವಾಳ ತಾಲೂಕು ಸಜೀಪಮೂಡ ಗ್ರಾಮದ ಮಿತ್ತಮಜಲು ಕ್ಷೇತ್ರದಲ್ಲಿ ವರ್ಷಂಪ್ರತಿ ಜರಗುವ ಸಜೀಪ ಮಾಗಣೆಯಲ್ಲಿ ನಡೆಯುವ  ಜಾತ್ರೆಯನ್ನು   ಕೊರೋನ ಸೋಂಕು ರೋಗ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸರಕಾರದ ಆದೇಶದ ಹಿನ್ನಲೆಯಲ್ಲಿ ಸಜಿಪ ಮಾಗಣಿ ಬಿಸು  ಜಾತ್ರೆಯ ಪ್ರಯುಕ್ತ ವಾರ್ಷಿಕ ನೇಮೋತ್ಸವ ವನ್ನು  ಮುಂದೂಡಲಾಗಿದೆ.

ಈ ಬಗ್ಗೆ ಸಜೀಪ ಮಾಗಣೆಯ ಆಡಳಿತದಾರರಾದ ಬಿ .ಸದಾನಂದ ಪೂಂಜ ರ ಅಧ್ಯಕ್ಷತೆಯಲ್ಲಿ ಜರಗಿದ ಸಮಾಲೋಚನಾ ಸಭೆಯಲ್ಲಿ  ಸರ್ವಾನುಮತದಿಂದ ತೀರ್ಮಾನಿಸಲಾಯಿತು ಕ್ಷೇತ್ರದ ಸಮಸ್ತ ಭಕ್ತರು ಈ  ಪರಿಸ್ಥಿತಿಯಲ್ಲಿ ಎಲ್ಲ ರೀತಿಯಿಂದ ಸಹಕರಿಸುವಂತೆ ಅವರು ಮನವಿ ಮಾಡಿದರು ಈ ಸಂದರ್ಭದಲ್ಲಿ ಮಾಗಣೆಯ ತಂತ್ರಿಗಳಾದ ಸುಬ್ರಮಣ್ಯ ಬಟ್ ಎಂ., ಸಜೀಪ ಗುತ್ತು ಗಡಿ ಪ್ರಧಾನ ರಾದ ಮುಂಡಪ್ಪ ಶೆಟ್ಟಿ ಯಾನೆ ಕೋಚು ಭಂಡಾರಿ ಬಿಜನ್ ತ್ತಾಡಿ ಗುತ್ತು, ಶಿವರಾಮ ಬಂಡಾರಿ ಮಾಡಂತ್ತಾಡಿಗುತ್ತು, ಯಶೋಧರ ರೈ, ಶ್ರೀಕಾಂತ್ ಶೆಟ್ಟಿ ಸಂಕೇಶ, ಜೀವನ್ ಆಳ್ವ, ಪ್ರದೀಪ್ ಶೆಟ್ಟಿ, ಕೋಚು  ಪೂಜಾರಿ ಸಾನದ ಮನೆ ,  ಕುoಛ್ ಪೂಜಾರಿ ಸಂಕೇಶ ,ವೆಂಕಪ್ಪ ಪೂಜಾರಿ ನಟ್ಟಿಲು  ಸಭೆಯಲ್ಲಿ ಹಾಜರಿದ್ದರು.

By suddi9

Leave a Reply

Your email address will not be published. Required fields are marked *