ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸರು ಗುರುವಾರ  ಜಿಲ್ಲಾಡಳಿತದ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುತ್ತಿದ್ದ  ವಾಹನಗಳನ್ನು ವಶಪಡಿಸಿ ಭರ್ಜರಿ ಬೇಟೆಯಾಡಿದ್ದಾರೆ. ಬರೋಬ್ಬರಿ 12 ಬೈಕ್ ತಲಾ ಒಂದು ಅಟೋ ಹಾಗೂ ಪಿಕಪ್  ವಶಕ್ಕೆ ಪಡಿಸಿಕೊಂಡಿದ್ದಾರೆ.5caceb35-8663-4487-b352-7a442f10c844

ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಗಳ ವರೆಗೆ ಅಗತ್ಯ ಸಾಮಾಗ್ರಿಗಳ ಖರೀದಿಗೆ   ಜಿಲ್ಲಾಡಳಿತ  ಅವಕಾಶವನ್ನು  ನೀಡಿತ್ತು.ಬಳಿಕ ಮೋಜು ಮಾಡಿ ಅನಾವಶ್ಯಕವಾಗಿ ಬೈಕ್ ನಲ್ಲಿ ತಿರುಗಾಡುತ್ತಿದ್ದವರ ವಿರುದ್ದ  ಪುಂಜಾಲಕಟ್ಟೆ ಎಸ್.ಐ.ಸೌಮ್ಯ ಮತ್ತವರ ಸಿಬ್ಬಂದಿಗಳು ಕಾರ್ಯಚರಣೆಕ್ಕಿಳಿದು ವಾಹನಗಳನ್ನು ವಶಪಡಿಸಿ ಉಳಿದವರಿಗೂ ಎಚ್ಚರಿಕೆ ನೀಡಿದ್ದಾರೆ.

ಹಾಗೆಯೇ ಬಂಟ್ವಾಳ ನಗರ ಪೊಲೀಸೆಉ ಕೂಡ ಬಿ.ಸಿ.ರೋಡ್,ತಲಪಾಡಿ ಪರಿಸರದಲ್ಲಿ ಅನಾವಶ್ಯಕವಾಗಿ ತಿರುಗುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

 

By suddi9

Leave a Reply

Your email address will not be published. Required fields are marked *