ಬಂಟ್ವಾಳ: ಕೋವಿಡ್-19ಸೋಂಕು ಜಗತ್ತಿನಾದ್ಯಂತ ಸೇರಿದಂತೆ ಭಾರತದಲ್ಲೂ ವ್ಯಾಪಕವಾಗಿ ಹರಡಿರುವುದರ ಕಾರಣ ತಕ್ಷಣದಿಂದಲೇ ಇದರ   ಹತೋಟಿಗೆ ಪೂರಕವಾಗಿ ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಸೊಸೈಟಿ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಸ್ವಯಂ ರಕ್ಸಣೆಗಾಗಿ 1500 ಮಾಸ್ಕ್ ಗಳನ್ನು ತಯಾರಿಸಿ ವಿತರಿಸಲಾಗಿದೆ ಎಂದು ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ.IMG-20200402-WA0108

ಗುರುವಾರ ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಮಾಸ್ಕ್ ವಿತರಿಸಿ  ಅವರು  ಮಾತನಾಡಿದರು.ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ದೀಪಕ್ ಎಮ್,ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ದಯಾನಂದ ಸಪಲ್ಯ, ಸಹಕಾರಿ ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ , ನಿರ್ದೆಶಕರು ಗಳಾದ ಹರೀಶ್ ಆಚಾರ್ಯ ರಾಯಿ,ರಾಜೇಶ್ ಶೆಟ್ಟಿ ಕೊನೆರೊಟ್ಟು, ಉಮೇಶ್ ಗೌಡ .ಮಂಚಕಲ್ಲು,,ದೇವರಾಜ್ ಸಾಲಿಯಾನ್,ಮಂಚಕಲ್  ,ಮಂದಾರತಿ ಎಸ್.ಶೆಟ್ಟಿ. ಲ್ಯಾಬ್ ಟೆಕ್ನಿಷಿಯಾನ್ ಬಸವರಾಜ್  ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *