ಬಂಟ್ವಾಳ: ನ್ಯಾಯಬೆಲೆ ಅಂಗಡಿಯಲ್ಲಿ ಗುರುವಾರ ರೇಷನ್ ವಿತರಣೆ ಆರಂಭವಾದ ಹಿನ್ನಲೆಯಲ್ಲಿ ಬಂಟ್ವಾಳ ಸಹಿತ ವಿವಿಧ ಸೊಸೈಟಿ,ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಖರೀದಿಗೆ ಜನ ಮುಗಿಬಿದ್ದ ದೃಶ್ಯ ಕಂಡುಬಂತು.ನ್ಯಾಯಬೆಲೆ ಅಂಗಡಿ 9.30 ಕ್ಕೆ ತೆರಯುವುದಾದರೂ   ಬಂಟ್ವಾಳ ರಥಬೀದಿಯಲ್ಲಿರುವ ಮೂರು ನ್ಯಾಯಬೆಲೆ ಅಂಗಡಿಯಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ರೇಷನ್ ಖರೀದಿಗಾಗಿ ಜನ ಸರತಿ ಸಾಲು ನಿಂತಿದ್ದರು.IMG-20200402-WA0061

ಸಂಜೆಯವರೆಗೂ ಬಂದ ಗ್ರಾಹಕರಿಗೆ ರೇಷನ್ ವಿತರಿಸಲಾಗುತ್ತಿದ್ದರೂ 12 ಗಂಟೆಯ ಬಳಿಕ ಯಾರು ಕೂಡ ರಸ್ತೆಯಲ್ಲಿ ತಿರುಗಾಡಬಾರದೆಂದು ಜಿಲ್ಲಾಡಳಿತ ಕಟ್ಟಪ್ಪಣೆ ಹೊರಡಿಸಿದರಿಂದ ಜನರು ಬೆಳಿಗ್ಗೆಯೇ ಅಂಗಡಿ ಮುಂದೆ ಜಮಾಯಿಸಿದರು.ಅಂಗಡಿ ತೆರೆದ ಬಳಿಕ ಜನರನ್ನು ಸಾಮಾಜಿಕ ಅಂತರಕಾಯ್ದುಕೊಂಡು ಸರತಿಯಲಿ ನಿಲ್ಲಿಸಿ ರೇಷನ್ ವಿತರಿಸಲಾಯಿತು.   ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಕಳ್ಳಿಗೆ ಶಾಖೆಯ ನ್ಯಾಯಬೆಲೆ ಅಂಗಡಿಯಲ್ಲಿ ಜನರಿಗೆ ಉತ್ತಮ ಸೌಲಭ್ಯದೊಂದಿಗೆ ಪಡಿತರ ವಿತರಿಸಲಾಯಿತು. ಜನರ ಅನುಕೂಲಕ್ಕಾಗಿ ಶಾಮೀಯಾನದ ವ್ಯವಸ್ಥೆಯೊಂದಿಗೆ ಕುಳಿತುಕೊಳ್ಳಲು ಸಾಮಾಜಿಕ ಅಂತರದೊಂದಿಗೆ ಆಸನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಸ್ಥೆಯ ವತಿಯಿಂದ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಲಾಯಿತು.IMG_20200402_103518

ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ ಮಲ್ಲಿಕಾ ವಿ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಶಿವಪ್ರಸಾದ್ ಕನಪಾಡಿ, ನಿರ್ದೇಶಕರಾದ ಪದ್ಮನಾಭ ರಾವ್ ಕನಪಾಡಿ, ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾ ಉಪಧ್ಯಕ್ಷ ಪುರುಷ ಎನ್ ಸಾಲಿಯಾನ್ ಮತ್ತು ಪಂಚಾಯತ್ ಸದಸ್ಯರು ಸಂಘದ ಮುಖ್ಯಕಾರ್ಯನಿರ್ವಾಹಣಾ ಅಧಿಕಾರಿ, ಪಂಚಾಯತ್ ಅಭಿವೃಧ್ದಿ ಅಧಿಕಾರಿ ಮತ್ತಿತರರು ಹಾಜರಿದ್ದು, ಯಾವುದೇ ಗೊಂದಲವಿಲ್ಲದೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜನರಿಗೆ ಎರಡು ತಿಂಗಳ ಪಡಿತರ ವಿತರಣೆ ಸುಸೂತ್ರವಾಗಿ ವಿತರಿಸಲಾಗಿದೆ. ಗುರುವಾರ ದಿನಸಿ,ತರಕಾರಿ ಅಂಗಡಿ 7ರಿಂದ ತೆರೆದಿದ್ದು,ಜನರು ಸಾಮಾಗ್ರಿಗಳ ಖರೀದಿಗೆ ಹೆಚ್ಚಿನ ಉತ್ಸಾಹ ತೋರಿರಲಿಲ್ಲ,ಬಹುತೇಕ ಮಂದಿ ರೇಷನ್ ಅಂಗಡಿ ಮುಂದೆಯೇ ಸೇರಿದ್ದರು.ಮಧ್ಯಾಹ್ನದ ಬಳಿಕ ರೇಷನ್ ಅಂಗಡಿಗಳು ತೆರೆದಿತ್ತಾದರೂ ಗ್ರಾಹಕರು ಮಾತ್ರ ಯಾರು ಇರಲಿಲ್ಲ.

By suddi9

Leave a Reply

Your email address will not be published. Required fields are marked *