ಬಂಟ್ವಾಳ: ಹತ್ತು ತಿಂಗಳ ಮಗುವಿಗೆ ಕೊರೊನೊ ಸೋಂಕು ದೃಢ ಪಟ್ಟ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಮುಂದಿನ ಆದೇಶದವರೆಗೆ  ಸಜೀಪನಡು ಗ್ರಾಮವನ್ನು ಲಾಕ್ ಡೌನ್ ಮಾಡಲಾಗುತ್ತಿದೆ ಎಂದು ಸಜೀಪ ನಡು ಗ್ರಾಪಂ ನಲ್ಲಿ ಗುರುವಾರ  ನಡೆದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.ಪಂಚಾಯತ್ ಅಧ್ಯಕ್ಷ ಮಹಮ್ಮದ್ ನಾಸಿರ್ ಸಭೆಯ ಅಧ್ಯಕ್ಷತೆ ವಹಿಸಿದ್ದು,  ಪಂಚಾಯತ್ ಸದಸ್ಯರು ಗಳು ಪೋಲೀಸ್ ಇಲಾಖೆ , ತಾಲೂಕು ಆರೋಗ್ಯಾಧಿಕಾರಿ ಹಾಗೂ ಟಾಸ್ಕಪೋರ್ಸ್ ಸಮಿತಿ ಸದಸ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು.17-35-34-WhatsApp-Image-2020-04-02-at-2.53.56-PM

ಲಾಕ್ ಡೌನ್ ಬಳಿಕ ತಾಲೂಕಾಡಳಿತ, ಪೋಲಿಸ್ , ‌ಆರೋಗ್ಯ ಇಲಾಖೆ , ಆಶಾಕಾರ್ಯಕರ್ತೆಯರ ನೀಡುತ್ರಿರುವ ಸೇವೆಗೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಸೀರ್ ಈಸಂದರ್ಭ ಅಭಿನಂದನೆ ಸಲ್ಲಿಸಿದರು.ಸಜೀಪ ನಡು ಗ್ರಾಮದ ಕಂದಮ್ಮನಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರ ಕುಟುಂಬದ  ಹಾಗೂ ಮನೆಯ ಸದಸ್ಯರ ಗಂಟಲುದ್ರವ ಪರೀಕ್ಷೆ ಯನ್ನು ಜಿಲ್ಲಾಸ್ಪತ್ರೆ ಮಾಡಿದ್ದು, ಅದರ ಫಲಿತಾಂಶವನ್ನು  ಪ್ರಕಟಿಸಿ ಸಜೀಪನಡು ಗ್ರಾಮದ ಜನರ ಆತಂಕವನ್ನು ದೂರಮಾಡುವಂತೆ ಗ್ರಾ. ಪಂ. ಅಧ್ಯಕ್ಷ ನಾಸಿರ್  ಆಧಿಕಾರಿಗಳಲ್ಲಿ ಮನವಿ ಮಾಡಿದರು.

ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ 1 ಬಿಜಾಪುರ ಮೂಲದ   16 ಮಂದಿ ಕಾರ್ಮಿಕರಿಗೆ ಊರಿಗೆ ಮರಳಲು ಸಾಧ್ಯವಾಗದೆ ಬಾಕಿಯಾಗಿದ್ದಾರೆ ಎಂದು ತಹಶೀಲ್ದಾರ್ ಅವರ ಗಮನಕ್ಕೆ ತಂದರು.  ಬಿ.ಸಿ.ರೋಡಿನ ದೇವಸ್ಥಾನವೊಂದರಿಂದ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುವ  ಭರವಸೆಯನ್ನು ತಹಶೀಲ್ದಾರ್ ನೀಡಿದರು.ಜಿಲ್ಲಾಡಳಿತದ ಮುಂದಿನ ನಿರ್ದೇಶನದಂತೆ ಗ್ರಾಮಸ್ಥರಿಗೆ ರೇಷನ್ ಪಡೆಯಲು ಅನುವು ಮಾಡಿಕೊಡಲು   ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಗ್ರಾಮದ ಶಾಲಾ ಮಕ್ಕಳಿಗೆ ಅಕ್ಷರ ದಾಸೋಹದ ಅಕ್ಕಿಯನ್ನು ಮನೆ,ಮನೆಗೆ ವಿತರಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರಿಗೆ ಪತ್ರ ಬರೆಯುಲು ಸಭೆಯಲ್ಲಿ ನಿರ್ಧರಿಸಲಾಯಿತು

By suddi9

Leave a Reply

Your email address will not be published. Required fields are marked *