ಬಂಟ್ವಾಳ: ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಕೋವಿಡ್- 19 ನ ಕೆಲಸದ ವೇಳೆ ತಾಲೂಕಿನ ಕೆಲವೊಂದು ಕಡೆಗಳಲ್ಲಿ ನಿಂದನೆ ಮಾಡಿರುವ ಬಗ್ಗೆ ತನ್ನ ಗಮನಕ್ಕೆ ಬಂದಿದ್ದು , ಅಂತವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಲು ಪೋಲೀಸ್ ಇಲಾಖೆಗೆ ಸೂಚಿಸಿದ್ದೇನೆ.
ಆಶಾಕಾರ್ಯಕರ್ತೆಯರು ಹಾಗೂ ಸರಕಾರಿ ಅಧಿಕಾರಿಗಳು ಕರ್ತವ್ಯ ಕ್ಕೆ ತೆರಳುವ ವೇಳೆ ಅವರಿಗೆ ನಿಂದನೆ ಅಸಭ್ಯ ವರ್ತನೆಗಳು ನಡೆದ ಬಗ್ಗೆ ಸ್ವತಃ ಅಶಾಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದು ಅಂತಹ ಕೆಲಸ ಮಾಡುವ ಯಾರೇ ಅಗಲಿ ಅವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ನೀಡಲು ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಜಾಗೃತಿ ಮೂಡಿಸುವ ವೇಳೆ ಮತ್ತು ಇಂತಹ ಸಂದರ್ಭಗಳಲ್ಲಿ ಕೆಲಸ ಮಾಡುವ ಯಾವುದೇ ಅಧಿಕಾರಿಗಳ ಕರ್ತವ್ಯ ಕ್ಕೆ ಅಡ್ಡಿಪಡಿಸುವ ಕೆಲಸಗಳಾದರೆ ಅವರಿಗೆ ತೊಂದರೆ ನೀಡಿದರೆ ಅದನ್ನು ಸಹಿಸಲು ಸಾಧ್ಯ ವಿಲ್ಲ ಅಂತವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಲು ಈಗಾಗಲೇ ಪೋಲಿಸ್ ಇಲಾಖೆಗೆ ತಿಳಿಸಿದ್ದೇನೆ ಮತ್ತು ಅಂತಹ ಪರಿಸ್ಥಿತಿ ನಿರ್ಮಾಣ ಕ್ಕೆ ಅವಕಾಶ ಮಾಡಬೇಡಿ ಎಂಬ ಸ್ಪಷ್ಟವಾದ ಸಂದೇಶ ನೀಡಿದ್ದಾರೆ.
