ಬಂಟ್ವಾಳ:   ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ  ಲಾಕ್ ಡೌನ್ ಸಂದರ್ಭ  ಜನಸಾಮಾನ್ಯರಿಗೆ ಉಂಟಾಗುವ ದಿನನಿತ್ಯದ ಆಹಾರ ಸಾಮಗ್ರಿಗಳ  ಸಮಸ್ಯೆಗಳ ಬಗ್ಗೆ ಕೋವಿಡ್ 19  ದ.ಕ. ನೋಡಲ್ ಅಧಿಕಾರಿ ಪೊನ್ನುರಾಜ್ ರವರನ್ನು ಬುಧವಾರ ಮಾಜಿ ಸಚಿವ ರಮಾನಾಥ ರೈ ನೇತೃತ್ವದ ನಿಯೋಗ ಭೇಟಿಯಾಗಿ ಚರ್ಚಿಸಿತು.IMG-20200401-WA0114

  ಲಾಕ್ ಡೌನ್ ಪಾಲನೆ ಸಂದರ್ಭ ಬಡವರು ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕೇರಳ ಮಾದರಿಯಂತೆ ಅಂಗನವಾಡಿ ಮೂಲಕ ಬಡವರಿಗೆ ಉಚಿತವಾಗಿ ನಿತ್ಯ ಪಡಿತರ ವಿತರಿಸುವಂತೆ ದ.ಕ.ಜಿಲ್ಲೆಯಲ್ಲೂ  ಕ್ರಮ ಕೈಗೊಳ್ಳುವ ತುರ್ತು ಅಗತ್ಯವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಈ ವೇಳೆ ಸಲಹೆ ನೀಡಿದರು.

  ಇದೇ ವೇಳೆ ನೋಡಲ್ ಅಧಿಕಾರಿ ಪೊನ್ನುರಾಜ್ ಅವರಿಗೆ  ಮನವಿ ಸಲ್ಲಿಸಿದ ಮಾಜಿ ಸಚಿವ ರೈಅವರು,   ಕೊರೋನಾ   ನಿಗ್ರಹಕ್ಕೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಗೆ ನಮ್ಮ ಸಹಕಾರ ಇದೆ ಎಂದ‌ರು,  ಅಕ್ಕಿ ಜೊತೆಗೆ ಸಕ್ಕರೆ,ಚಾಹುಡಿ,ಧವಸಧಾನ್ಯದಂತ ಎಲ್ಲಾ  ದಿನಬಳಕೆಯ ವಸ್ತುಗಳನ್ನು ಕೂಡ ಉಚಿತವಾಗಿ ಬಡವರ ಪ್ರತಿ  ಮನೆಗೂ ತಲುಪಿಸುವ ವ್ಯವಸ್ಥೆ  ಶೀಘ್ರ ನಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

 ಗ್ರಾಮ ಪಂಚಾಯಿತ್ ಗಳನ್ನು ಕೇಂದ್ರೀಕರಿಸಿಕೊಂಡು ಕಾರ್ಯಪಡೆಯ ಮೂಲಕ ಜನರಿಗೆ ನೆರವಾಗಬೇಕು , ಅತಿಥಿ ಕಾರ್ಮಿಕರಿಗೆ ಪಂಚಾಯಿತಿಯಲ್ಲಿ ಗಂಜಿಕೇಂದ್ರ ತೆರೆದು ಅಲ್ಲಿ ಅವರಿಗೆ ಎಲ್ಲಾ ಸೌಕರ್ಯ ವನ್ನು ಒದಗಿಸುವಂತೆ ಒತ್ತಾಯಿಸಿದರು.  ಪುರಸಭಾ ವ್ಯಾಪ್ತಿಯಲ್ಲೂ ಈವರೆಗೂ ಕಾರ್ಯಪಡೆ ರಚನೆ ಆಗಿಲ್ಲ,ಇಲ್ಲು ಕೂಡ ಮುಖ್ಯಸ್ಥರ ನೇತೃತ್ವದಲ್ಲಿ  ತಕ್ಷಣ ಕಾರ್ಯಪಡೆಯನ್ನು ರಚಿಸಬೇಕು ಎಂದು    ಮಾಜಿ  ಸಚಿವರಾದ ಬಿ ರಮಾನಾಥ ರೈ ಯವರು ಪೊನ್ನುರಾಜ್ ಅವರನ್ನು ಆಗ್ರಹಿಸಿದರು.  ಈ ಸಂದರ್ಭದಲ್ಲಿ ಮಂಗಳೂರು ಉಪ ವಿಭಾಗಧಿಕಾರಿ ಮದನ್ ಮೋಹನ್,ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ರವೂಫ್, ನೀರಜ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *