ಬಂಟ್ವಾಳ: ಭಾರತವೂ ಸೇರಿದಂತೆ ಜಗತ್ತನ್ನು ಕಾಡುತ್ತಿರುವ ಕೊರೊನಾ ಮಹಾಮಾರಿಯನ್ನು ಹೋಗಲಾಡಿಸಲು ಪ್ರಾರ್ಥಿಸಿ ಮೆಲ್ಕಾರ್ ಯುವ ಸಂಗಮದ ವತಿಯಿಂದ ಮಂಗಳವಾರ ನರಹರಿ ಪರ್ವತ ಶ್ರೀ ಸದಾಶಿವ ದೇವರಿಗೆ ಸರ್ವಸೇವೆ ಪೂಜೆಯನ್ನು ಮಾಡಿಸಲಾಯಿತು.3103ks4 ph

ಶೀಘ್ರದಲ್ಲಿ ಈ ಖಾಯಿಲೆಯು ದೂರವಾಗಿ ಜನಜೀನವ ಯಥಾಸ್ಥಿತಿಗೆ ಬರಲಿ ಎಂದು ಅರ್ಚಕರು ಸಂಕಲ್ಪಿಸಿ ಪ್ರಾರ್ಥಿಸಿದರು. ಬಳಿಕ ಪ್ರಧಾನ ಅರ್ಚಕ ಪರಮೇಶ್ವರ ಮಯ್ಯ ಅವರ ಮೂಲಕ ಕ್ಷೇತ್ರದ ಸಿಬಂದಿಗೆ ಯುವ ಸಂಗಮದ ಅಧ್ಯಕ್ಷ ಓಂಪ್ರಕಾಶ್ ಅವರು ಮಾಸ್ಕ್ ವಿತರಿಸಲಾಯಿತು.
ಕ್ಷೇತ್ರದ ಮೊಕ್ತೇಸರ ಸುಂದರ ಬಂಗೇರ, ಯುವ ಸಂಗಮದ ಪ್ರಧಾನ ಕಾರ್ಯದರ್ಶಿ ಹರೀಶ್ ಶೆಣೈ, ಗೌರವಾಧ್ಯಕ್ಷ ಎಂ.ಎನ್.ಕುಮಾರ್, ನರಹರಿ ಪರ್ವತ ಕ್ಷೇತ್ರದ ಮ್ಯಾನೇಜರ್ ಆನಂದ್ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *