ಬಂಟ್ವಾಳ: ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಮನೆಯಿಂದ ತಪ್ಪಿಸಿಕೊಂಡಿದ್ದಾನೆಂಬ ಎಂಬ ಹಬ್ಬಿದ ಸುದ್ದಿಯ ಹಿನ್ನಲೆಯಲ್ಲಿ ಜನರು ಒಂದಷ್ಟು ಹೊತ್ತು ಭಯಭೀತರಾದ ಪ್ರಸಂಗ ಸಜೀಪನಡುಗ್ರಾಮದಲ್ಲಿ ಶನಿವಾರ ನಡೆಯಿತು.

ಸಜೀಪನಡು ಗ್ರಾಮದ ಲಕ್ಷಣ ಕಟ್ಟೆಯ ಕಂದಮ್ಮನಿಗೆ ಕೊರೊನೊ ಪಾಸಿಟಿವ್ ಎಂದು ಗೊತ್ತಾದ ಕೂಡಲೇ ಮನೆಯಲ್ಲಿರುವ ಮಗುವಿನ ಅಜ್ಜ, ಮಗುವಿನ ಅಪ್ಪ, ಚಿಕ್ಕಪ್ಪ ಹಾಗೂ ಚಿಕ್ಕಮ್ಮ ನನ್ನು ಮುಡಿಪುವಿನ ಪ್ರತ್ಯೇಕ ಮನೆಯಲ್ಲಿ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು.
ಆದರೆ ಮಗುವಿನ ಅಜ್ಜ ಶನಿವಾರ ಮುಂಜಾನೆ ವೇಳೆ ಮುಡಿಪುವಿನ ಮನೆಯಿಂದ ಸಮೀಪನಡು ಗ್ರಾಮದ ಮನೆಗೆ ಬಂದಿದ್ದರೆಂಬ ಸುದ್ದಿ ಸ್ಥಳೀಯವಾಗಿ ಹರಡಿತ್ತು.ಈ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಪೋಲೀಸರು ಆವರನ್ನು ವಾಪಾಸು ಮುಡಿಪುವಿನಲ್ಲಿ ಇಲಾಖೆ ಸೂಚಿಸಿದ ಹೋಂ ಕ್ವಾರಂಟೈನ್ ಗೆ ಕಳುಹಿಸಿದ್ದಾರೆ.ಆತನಿಗೆ ಇಲ್ಲಿಗೆ ಬರಲು ವಾಹನದ ನೆರವು ನೀಡಿದವರು ಯಾರು ಮತ್ತು ಪೋಲೀಸ್ ಸರ್ಪಗಾವಲನ್ನು ಭೇದಿಸಿ ಅವರು ಹೇಗೆ ಹೊರಗಡೆ ಬಂದರೆಂಬುದೇ ಪ್ರಶ್ನೆಯಾಗಿದೆ.
ಸಜೀಪ ಲಾಕ್ ಡೌನ್ :
ಸಜೀಪ ನಡು ಗ್ರಾಮದ ಲಕ್ಷಣಕಟ್ಟೆ ಎಂಬಲ್ಲಿನ 10 ತಿಂಗಳ ಕಂದಮ್ಮನಿಗೆ ಕೊರೊನೊ ಸೊಂಕು ದೃಡಪಟ್ಟ ಹಿನ್ನೆಲೆಯಲ್ಲಿ ಇಡೀ ಸಜೀಪನಡು ಗ್ರಾಮವೇ ಸಂಪೂರ್ಣ ಲಾಕ್ ಡೌನ್ ಅಗಿದೆ.ಪ್ರಸಕ್ತ ಪರಿಸ್ಥಿತಿಯಲ್ಲಿ ಅ ಗ್ರಾಮಕ್ಕೆ ಯಾರು ಬರುವಂತಿಲ್ಲ, ಆರೋಗ್ಯ ಇಲಾಖೆಯ ನಿರ್ದೇಶನದಂತೆ ಗರಿಷ್ಠ ದಿನಗಳವರೆಗೆ ಇದೇ ರೀತಿ ಮುಂದುವರಿಯಲಿದೆ.ಈ ಗ್ರಾಮದ ಜನರು ಕೂಡಾ ಮನೆಯಿಂದ ಹೊರಬರುತ್ತಿಲ್ಲ, ಸಜೀಪನಡು ಪೇಟೆ ಸಂಪೂರ್ಣ ಬಂದ್ ಅಗಿದೆ. ಗ್ರಾಮದ ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಗ್ರಾ.ಪಂ.ಅಧಿಕಾರಿಗಳ ನೇತ್ರತ್ವದಲ್ಲಿ ಪೂರೈಸಲಾಗುತ್ತಿದೆ.
ಎಸ್.ಐ.ಪ್ರಸನ್ನ ಮೊಕ್ಕಾಂ:
ಮಗುವಿಗೆ ಸೋಂಕು ದೃಢಪಟ್ಟ ಬೆನ್ನಲ್ಲೇ ಎಸ್. ಪಿ.ಲಕ್ಮೀಪ್ರಸಾದ್ ಸ್ಥಳಕ್ಕೆ ಬೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಲ್ಲದೆ, ಗ್ರಾ.ಪಂ.ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಲಾಕ್ ಡೌನ್ ಸಂದರ್ಭದಲ್ಲಿ ಯಾರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು.ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಮತ್ತವರ ಸಿಬ್ಬಂದಿಗಳು ಕಳೆದೆರಡುದಿನಗಳಿಂದ ಸಜೀಪನಡು ಗ್ರಾಮದಲ್ಲಿ ಮೊಕ್ಕಾಂ ಹೂಡಿಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ.ಹೆಚ್ಚು ವರಿಯಾಗಿ ಕೆ.ಎಸ್.ಆರ್.ಪಿ.ಪೋಲೀಸ್ ತುಕಡಿ ಕೂಡ ಇಲ್ಲಿ ನಿಯೋಜಿಸಲಾಗಿದೆ.
ಮಗುವಿಗೆ ಸೋಂಕು ದೃಡವಾದ ಬಳಿಕ ಮಗು ಸಹಿತ ತಾಯಿ ಹಾಗೂ ಅಜ್ಜಿ ಯನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ. ಉಳಿದಂತೆ ಮಗವಿನ ತಂದೆ,ಚಿಕ್ಕಪ್ಪ, ಹಾಗೂ ಚಿಕ್ಕಮ್ಮ ಹಾಗೂ ಅಜ್ಜ ನನ್ನು ಮುಡಿಪುವಿನ ಪ್ರತ್ಯೇಕ ಮನೆಯಲ್ಲಿ ಹೋಂ.ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದುಇಲಾಖಾ ಮೂಲಗಳು ತಿಳಿಸಿದೆ.
