ಬಂಟ್ವಾಳ:  ಮಹಾಮಾರಿ ಕೊರೊನಾ ವೈರಾಸ್ ಹತೋಟಿಗೆ ಬಾರದೆ ದೇಶದಾದ್ಯಂತ ಹಬ್ಬಿರುವುದರಿಂದ ಹತೋಟಿಗೆ ತರುವ ನಿಟ್ಟಿನಲ್ಲಿ 15 ದಿನಗಳ ಮಟ್ಟಿಗೆ ಭಾರತದಾದ್ಯಂತ  ಸಂಪೂರ್ಣ ಬಂದ್ ಮಾಡುವಂತೆ ರಾಜ್ಯ ಸರಕಾರಗಳಿಗೆ ಸೂಚಿಸುವಂತೆ ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ ಪ್ರಭು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಕೊರೋನಾ ವಿರುದ್ದ ದೇಶದಾದ್ಯಂತ  ಸರ್ಕಾರದ ಹಲವು ಪರಿಹಾರ ಕಾರ್ಯಗಳ ನಡುವೆಯೂ ವ್ಯಾಪಕವಾಗಿ ಹರಡುತ್ತಿರುವುದಕ್ಕೆ ಜನಸಾಮಾನ್ಯರ  ನಿರ್ಲಕ್ಷ್ಯ ಧೋರಣೆ ಪ್ರಮುಖ ಕಾರಣವಾಗಿದೆ.IMG_20190622_204841

ಸರಕಾರದ ಲಾಕ್ ಡಾನ್ ಇದ್ದರೂ ದೇಶದ, ರಾಜ್ಯದ ಹಲವೆಡೆಯಲ್ಲಿ  ಜನ ಗುಂಪು ಸೇರುವುದು ನಿಲ್ಲಿಲ್ಲ,ಸರಕಾರದ ಉನ್ನತಮಟ್ಟದ ಅಧಿಕಾರಿಗಳು ಪದೇ ಪದೇ ಅಗತ್ಯ ವಸ್ತುಗಳ ಬಗ್ಗೆ ಭಯ ಬೇಡ ಎಂದು  ಪ್ರಕಟನೆಗಳನ್ನು ಪತ್ರಿಕೆ,ಸಾಮಾಜಿಕ ಜಾಲತಾಣದಲ್ಲಿ ನೀಡುತಿರುವುದು ಕೊರೊನಾ ಹತೋಟಿಗೆ ಹಿನ್ನಡೆಯಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.ಜನರೆಲ್ಲಾ ಗ್ರಾಮೀಣ ಪ್ರದೇಶದಿಂದ ಪೇಟೆಗೆ ,ಪೇಟೆಯಿಂದ ಹಳ್ಳಿಗಳಿಗೆ  ಅಗತ್ಯ ವಸ್ತುಗಳ ಖರೀದಿ ನೇಪದಲ್ಲಿ ಊರೂರು ಸುತ್ತುತ್ತಿದ್ದಾರೆ.ಪೋಲಿಸ್ ಇಲಾಖೆಯು ಮಾತ್ರ ಯಾವುದನ್ನೂ ಲೆಕ್ಕಿಸದೇ ಸಮೋರೊಪಾದಿಯಲ್ಲಿ ಹಗಲಿರುಳು  ಕಟ್ಟು-ನಿಟ್ಟಿನ ಕ್ರಮ ಕೈಗೋಳ್ಲಿತಿದ್ದು ಸ್ವಲ್ಪ ಮಟ್ಟಿಗೆ ಹತೋಟಿಗೆ ಸಾದ್ಯವಾಗಿದೆ.  ಕೊರೊನಾ ವೈರಾಸ್ ಸಂಪೂರ್ಣ ಹತೋಟಿಗೆ ಬರ ಬೇಕಾದರೆ  ಭಾರತದಾದ್ಯಂತ 15 ದಿನ ಸಂಪೂರ್ಣ ಬಂದ್ ಮಾಡ ಬೇಕು .

ಅಗತ್ಯ ವಸ್ತುಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲು ಸೂಕ್ತ ಅದೇಶ ಹೋರಡಿಸಬೇಕು ಎಂದು ಅವರು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಹೀಗೆ ಮಾಡುವುದರಿಂದ ಮಾತ್ರ ಕೊರೊನಾ ವನ್ನು ಭಾರತದಲ್ಲಿ ಹತೋಟಿಗೆ ತರಲು ಸಾದ್ಯ ಎಂದು ತಿಳಿಸಿರುವ ಅವರು ಮೃದು ಧೋರಣೆಯಿಂದ ಕೊರೊನಾ ಹತೋಟಿ ಭಾರತದಲ್ಲಿ ಸಾದ್ಯವಿಲ್ಲ,ಮಂಗಳೂರು ಸಂಸದರಾದ ನಳೀನ್ ಕುಮಾರ್ ಕಟೀಲ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿಯವರು ಈಗಾಗಲೇ ಮಂಗಳೂರು ಸಂಪೂರ್ಣ ಬಂದ್ ಗೆ ಕ್ರಮ ಕೈಗೊಂಡಿರುವುದು ಒಳ್ಳೆಯ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.ದೇಶದಾದ್ಯಂತ ಇರುವ ಮಸೀದಿ , ಚರ್ಚ್,ದೇವಾಲಯಗಳ ವಠಾರದಲ್ಲಿ ಹಾಗೂ ಪ್ರಮುಖ ನಗರ, ಮಾರುಕಟ್ಟೆಯಲ್ಲಿ ಪೋಲಿಸ್ ಸರ್ಪಗಾವಲು ಮತ್ತು ದೇಶದೆಲ್ಲೆಡೆ  ಮಿಲಿಟರಿ,ಅರೆ ಮಿಲಿಟರಿ ಪಡೆ ನಿಯೋಜನೆ ಮಾಡುವಂತೆಯೂ ಅವರು ಪತ್ರದಲ್ಲಿ ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *