ಬಂಟ್ವಾಳ: ಕರೋನಾ ವೈರಸ್ ನ ಹಿನ್ನಲೆಯಲ್ಲಿ ಜನತಾಕಪ್ಯೂ೯ ಜಾರಿಯಲ್ಲಿದ್ದರೂ ಅಂಗಡಿ ತೆರೆದು ವ್ಯವಹಾರ ನಡೆಸುತ್ತಿದ್ದ ಜವುಳಿ ವ್ಯಾಪಾರ ನಡೆಸುತ್ತಿರುವುದನ್ನು ಬಂಟ್ವಾಳ ಪುರಸಭಾಧಿಕಾರಿಗಳು ಪತ್ತೆಹಚ್ಚಿ ಲಾಕ್ ಹಾಕಿದ ವಿದ್ಯಮಾನ ಶುಕ್ರವಾರ ಸಂಜೆ ನಡೆದಿದೆ.
ಬಂಟ್ವಾಳ ಜಕ್ರಿಬೆಟ್ಟು ಬಳಿರುವ ಮನೆಯೊಂದರಲ್ಲಿ ಕಾರ್ಯಾಚರಿಸುವ ಮಧುಸಿಲ್ಕ್ ಜವುಳಿ ಅಂಗಡಿ ತಾಲೂಕಾಡಳಿತದ ಆದೇಶವನ್ನು ಉಲ್ಲಂಘಿಸಿ ಕಾಯಾಚರಿಸುತ್ತಿದ್ದು,ಮಾಹಿತಿ ಪಡೆದ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ಮಾರ್ಗದರ್ಶನದಲ್ಲಿ ಕೊವೀಡ್ ೧೯ ಕರ್ತವ್ಯದಲ್ಲಿದ್ದ ಪುರಸಭೆಯ ಇಕ್ಬಾಲ್ ಅವರು ದಾಳಿ ನಡೆಸಿ ಮಧುಸಿಲ್ಕ್ ನ್ನು ಮುಚ್ಚಿಸಿ ಅಲ್ಲಿದ್ದ ಕೆಲ ದಾಖಲೆಪತ್ರವನ್ನು ವಶಪಡಿಸಿದ್ದಾರೆ.ಈ ಅಂಗಡಿ ಪುರಸಭೆಯ ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ನಡೆಯುತಿತ್ತು ಎಂದು ದಾಳಿಯವೇಳೆ ಬಯಲಿಗೆ ಬಂದಿದೆ.

