ಬಂಟ್ವಾಳ:ಪಾಣೆಮಂಗಳೂರು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭಾ ಕ್ಷೇತ್ರದ ನೌಕರರೊರ್ವರು  ದೇವಸ್ಥಾನದ ಕಚೇರಿಯಲ್ಲಿಯೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ನಂದಾವರ ನಿವಾಸಿ ಮಹಾಬಲ ಗಟ್ಟಿ (87 ) ಮೃತಪಟ್ಟವರಾಗಿದ್ದಾರೆ.

IMG-20200328-WA0023
ಇವರು ಕೆಲವು ಸಮಯಗಳಿಂದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೂ ದೇವಸ್ಥಾನದ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು.ಎಳೆಯ ವಯಸ್ಸಿನಿಂದಲೇ ಅಂದರೆ ಸುಮಾರು 1945,ರಿಂದಲೇ  ನಂದಾವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಇವರು ಕೆಲ ಸಮಯದ ಹಿಂದೆ ನಿವೃತ್ತಿಯನ್ನು ಹೊಂದಿದ್ದರು.

ಅ ಬಳಿಕವು ದೇವಸ್ಥಾನದ ಸೇವೆಯನ್ನು ಮಾತ್ರ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.ನಂದಾವರ ಕ್ಷೇತ್ರದ ಜಾತ್ರೋತ್ಸವದ ಸಂದರ್ಭದಲ್ಲಿ ಸಂಪೂರ್ಣ ಹೊಣೆಗಾರಿಕೆಯಿಂದ ಕೆಲಸ ನಿರ್ವಹಿಸುತ್ತಿದ್ದರು.ನಂದಾವರ ಕ್ಷೇತ್ರದಲ್ಲಿ  ಹಲವಾರು ವರ್ಷಗಳಿಂದ ನಿಸ್ವಾರ್ಥ ಸೇವೆಯನ್ನು  ಸಲ್ಲಿಸುತ್ತಿದ್ದ  ಎನ್.ಮಹಾಬಲ ಗಟ್ಟಿ. ಇವರು  ಶನಿವಾರ ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ಕಚೇರಿಯ ಬಳಿ ಕುಳಿತು ಕೊಂಡಿದ್ದ ಅವರಿಗೆ ಎದೆನೋವು ಕಾಣಿಸಿಕೊಂಡು  ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದ್ದಾರೆ ಎಂದು ದೇವಳದ ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.

ಇವರು ನಂದಾವರ ಶ್ರೀ ವಿಘ್ನೇಶ್ವರ ಸೇವಾ ಸಮಿತಿಯ ಗೌರವ ಸಲಹೆಗಾರರಾಗಿದ್ದರು.ಇವರು ಪತ್ನಿ ಹಾಗೂ ಎರಡು ಗಂಡು, ಎರಡು ಹೆಣ್ಣು ಮಕ್ಕಳ ನ್ನು ಅಗಲಿದ್ದಾರೆ. ಇವರ ನಿಧನಕ್ಕೆ  ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ,ಕಾರ್ಯ ನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿ ಗಳು ಸಂತಾಪ ವ್ಯಕ್ತಪಡಿಸಿದರು.

By suddi9

Leave a Reply

Your email address will not be published. Required fields are marked *