ಬಂಟ್ವಾಳ: ಬಂಟ್ವಾಳ ಪುರಸಭೆಯಲ್ಲಿಯು ಇ- ಆಡಳಿತ ವ್ಯವಸ್ಥೆ ಜಾರಿಗೆ ಬಂದಿದೆ. ಬಂಟ್ವಾಳ ಪುರಸಭೆಯ ನೊಂದಾಯಿತ ಇಂಜಿನಿಯರ್ ಸತೀಶ್ ಕುಲಾಲ್ ಇವರ ತಂತ್ರಾಂಶದ ಮೂಲಕ ಬಿ.ಮೂಡ ಗ್ರಾಮದ ಸ. ನಂ. 295-3ಎ ರಲ್ಲಿ ಮಹೇಶ್ ಭಟ್ ಅಗ್ರಬೈಲು ಅವರಿಗೆ ಪ್ರಥಮವಾಗಿ ಇ-ಆಡಳಿತ ವ್ಯವಸ್ಥೆಯಂತೆ ಕಟ್ಟಡ ಪರವಾನಿಗೆಯನ್ನು ಹಸ್ತಾಂತರಿಸಲಾಗಿದೆ.
ಕರ್ನಾಟಕ ರಾಜ್ಯ ಸರಕಾರವು ಇ-ಆಡಳಿತ ವ್ಯವಸ್ಥೆಯಂತೆ ಕಾಗದ ರಹಿತ ಆಡಳಿತ ಜಾರಿಗೊಳಿಸಲು ಮುಂದಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದ್ದು, ಇದೀಗ ಬಂಟ್ವಾಳ ಪುರಸಭೆಯಲ್ಲಿಯು ಕಟ್ಟಡ ಪರವಾನಿಗೆ ಪ್ರಕ್ರಿಯೆಯನ್ನು ಇ-ಆಡಳಿತ ವ್ಯವಸ್ಥೆಯಂತೆ ಕಾಗದ ರಹಿತ ಆಡಳಿತ ಜಾರಿಗೆ ಬಂದಿದೆ ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ತಿಳಿಸಿದ್ದಾರೆ. ಎಲ್ಲಾ ನೊಂದಾಯಿತ ವಾಸ್ತುಶಿಲ್ಪಿ,ಅಭಿಯಂತರರುಗಳಿಗೆ ಸಂಬಂಧಪಟ್ಟ ಸಿಬ್ಬಂದಿಗಳಿಗೆ ಈ ಬಗ್ಗೆ ತರಬೇತಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೊದಲ ಕಟ್ಟಡ ಪರವಾನಿಗೆಯನ್ನು ಬಿ.ಮೂಡ ಗ್ರಾಮದ ಮಹೇಶ್ ಭಡ್ ಅವರಿಗೆ ಈಗಾಗಲೇ ಹಸ್ತಾಂತರಿಸಲಾಗಿದ್ದು,ಈ ಸಂದರ್ಭ ಪುರಸಭಾ ಕಿರಿಯ ಅಭಿಯಂತರರಾದ ಡೊಮಿನಿಕ್ ಡಿಮೆಲ್ಲೋ ಸಂಬಂಧಪಟ್ಟ ಸಿಬ್ಬಂದಿಗಳು ಉಪಸ್ಥಿತರಿದ್ದರು.
