ಬಂಟ್ವಾಳ: ವಿಶ್ವ ಮಹಿಳಾ ದಿನದ ಪ್ರಯುಕ್ತ ಬಂಟ್ವಾಳ ಪೊಲೀಸ್ ಉಪ ವಿಭಾಗದ ಎಲ್ಲಾ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸ್ವರಕ್ಷ ಫಾರ್ ವುಮೆನ್ ಟ್ರಸ್ಟ್ ವತಿಯಿಂದ ಮಹಿಳೆಯರಿಗೆ ಸ್ವರಕ್ಷಣಾ ತರಬೇತಿ ಕಾರ್ಯಕ್ರಮ ನಡೆಯಿತು .ಬಂಟ್ವಾಳ ಪೊಲೀಸ್ ಉಪ ವಿಭಾಗದ ಡಿ.ವೈ.ಎಸ್.ಪಿ. ವೆಲೆಂಟ್ಯಾನ್ ಡಿಸೋಜ ರವರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೋಲೀಸರು ಅರೊಪಿ ದಸ್ತಗಿರಿ ಸಮಯದಲ್ಲಿ ಸ್ವ ರಕ್ಷಣ ಕಲೆ ಮಹಿಳಾ ಪೊಲೀಸ್ ಸಿಬ್ಬಂದಿಯವರಿಗೆ ಹೆಚ್ಚು ಉಪಯುಕ್ತವಾದದ್ದು ಎಂದು ತಿಳಿಸಿದರು .

ಬಂಟ್ವಾಳ ವೃತ್ತ ನಿರೀಕ್ಷರಾದ ಟಿ. ಡಿ. ನಾಗರಾಜ,ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪ ನಿರೀಕ್ಷರಾದ ಪ್ರಸನ್ನ ಎಮ್.ಎಸ್. ಬಂಟ್ವಾಳ ನಗರ ಠಾಣೆ ಉಪ ನಿರೀಕ್ಷಕರಾದ ಸಂತೊಷ ಬಿ.ಪಿ.,ಬಂಟ್ವಾಳ ಟ್ರಾಫಿಕ್ ಠಾಣೆ ಉಪನಿರೀಕ್ಷಕರಾದ ರಾಮ ನಾಯಕ್,ಪುಂಜಾಲಕಟ್ಟೆ ಠಾಣೆ ಉಪ ನಿರೀಕ್ಷರಾದ ಸೌಮ್ಯ,ಬೆಳ್ತಂಗಡಿ ಠಾಣೆ ಉಪ ನಿರೀಕ್ಷಕರಾದ ಭಾರತಿ ರವರು ಪಾಲ್ಗೊಂಡಿದ್ದರು.ಟ್ರಸ್ಟ್ ನ ಶೋಭ ಮತ್ತು ಅವರ ಮಗ ಕಾರ್ತಿಕ್ ರವರು ಸ್ವರಕ್ಷಣೆಯ ಕಲೆಗಳನ್ನು ಸಿಬ್ಬಂದಿಯವರಿಗೆ ತಿಳಿಸಿದರು.
