ಶ್ರೀರಾಮ ಶಿಶುಮಂದಿರ ಕಲ್ಲಡ್ಕದಲ್ಲಿಅಮ್ಮನ ಪಾದಪೂಜೆ ಮತ್ತು ಪಾಲಕರ ಸಭೆ ವೇದವ್ಯಾಸ ಸಭಾಂಗಣದಲ್ಲಿ ನಡೆಯಿತು. ಶ್ರೀರಾಮ ಶಿಶುಮಂದಿರ ಕಲ್ಲಡ್ಕದಲ್ಲಿಒಂದು ವಿಶಿಷ್ಟ ಕಾರ್ಯಕ್ರಮಅಮ್ಮನಪಾದಪೂಜೆ. ಈಗಾಗಲೇ ಶಿಶುಮಂದಿರದಲ್ಲಿ ಶಿಕ್ಷಣ ಪಡೆಯುತ್ತಿರುವ ಪುಟಾಣಿಗಳು ತಮ್ಮಅಮ್ಮನಪಾದಪೂಜೆಯನ್ನು ಮಾಡಿದರು.

3 ಅಮ್ಮಂದಿರನ್ನು ಬೆಂಚಿನ ಮೇಲೆ ಸಾಲಾಗಿ ಕುಳ್ಳಿರಿಸಿ ಕೇವಲ ಪಾದ ಮಾತ್ರಕಾಣುವಂತೆಪರದೆಯನ್ನುಕಟ್ಟಲಾಗಿತ್ತು. ಪುಟಾಣಿಗಳು ತಮ್ಮತಮ್ಮಅಮ್ಮನ ಪಾದವನ್ನೇನೋಡಿ ಗುರುತಿಸಿ ಅದರ ಪಕ್ಕದಲ್ಲಿಯೇ ಕುಳಿತುಕೊಂಡದ್ದುವಿಶೇಷವಾಗಿತ್ತು. ನಂತರ ಪರದೆಯನ್ನು ಬಿಚ್ಚಲಾಗಿತ್ತು. ಪುಟಾಣಿಗಳು ಅವರಅಮ್ಮನ ಪಾದಗಳಿಗೆ ನೀರು ಹಾಕಿ ಅರಶಿನ ಕುಂಕುಮ ಹಚ್ಚಿ ಪುಷ್ಪವನ್ನು ಅರ್ಪಿಸಿ ಪಾದಪೂಜೆ ಮಾಡಿದರು. ಅಮ್ಮಂದಿರು ಮಕ್ಕಳಿಗೆ ಅಕ್ಷತೆ ಹಾಕಿ ಸಿಹಿಯನ್ನು ತಿನ್ನಿಸಿ ಆಶೀರ್ವದಿಸಿದರು.ಒಟ್ಟು 117 ಮಕ್ಕಳ ಅಮ್ಮಂದಿರುಈ ಕಾರ್ಯಕ್ರಮದಲ್ಲಿತುಂಬಾ ಸಂತೋಷದಿಂದ ಭಾಗವಹಿಸಿದರು.

1
ಬಳಿಕ ನಡೆದಪಾಲಕರ ಸಭೆಯಲ್ಲಿ ಪಾಲಕರುತಮ್ಮ ಮಕ್ಕಳಲ್ಲಿ ಆದಬದಲಾವಣೆಗಳನ್ನು ಮತ್ತು ಪಾದಪೂಜೆಕಾರ್ಯಕ್ರಮದ ಅನಿಸಿಕೆಗಳನ್ನು ಹಂಚಿಕೊಂಡರು.ತಾನುತನ್ನಜೀವನದಲ್ಲಿಯಾವತ್ತೂತನ್ನಅಮ್ಮನ ಪಾದ ಪೂಜೆ ಮಾಡದೆಇದ್ದರೂ, ತನ್ನ ಮಗು ಪಾದಪೂಜೆ ಮಾಡಿರುವುದಕ್ಕೆನನಗೆ ತುಂಬಾ ಸಂತೋಷವಾಯಿತು.

4ಮಗಳು ಪಾದಪೂಜೆ ಮಾಡಿದಕಾರಣ ನನ್ನಅಮ್ಮನ ಪಾದಪೂಜೆ ಮಾಡಬೇಕುಅಂತ ಅನಿಸಿದೆ.ಎಂದು ಅನಿಸಿಕೆಯಲ್ಲಿ ವ್ಯಕ್ತಪಡಿಸಿದರು. ಹಾಗೆಯೇತಾಯಂದಿರುತಮ್ಮ ಮಕ್ಕಳು ಪಾದವನ್ನುಗುರುತಿಸಿ ಕುಳಿತುಕೊಂಡಿರುವುದರ ಬಗ್ಗೆ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.

4ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ|| ಪ್ರಭಾಕರ ಭಟ್‍ಇವರು ಪಾಲಕರಿಗೆ ಮಾರ್ಗದರ್ಶನ ಮಾಡಿದರು. ಈ ಸಂದರ್ಭದಲ್ಲಿವಿದ್ಯಾಕೇಂದ್ರದಅಧ್ಯಕ್ಷರಾದ ಬಿ. ನಾರಾಯಣ ಸೋಮಾಯಾಜಿ, ಡಾ||ಕಮಲಾ ಭಟ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಶಿಶುಮಂದಿರದ ಪುಟಾಣಿಗಳು ಪ್ರಾರ್ಥನೆ ಮಾಡಿದರು. ಕಾರ್ಯಕ್ರಮವನ್ನು ಶ್ರೀಮತಿ ಗುಲಾಬಿ ಸ್ವಾಗತಿಸಿ, ಶ್ರೀಮತಿ ಶಾಂತಲಕ್ಷ್ಮೀ ವಂದಿಸಿ, ಶ್ರೀಮತಿ ಸಂಧ್ಯಾ ನಿರೂಪಿಸಿದರು.

4 2

By suddi9

Leave a Reply

Your email address will not be published. Required fields are marked *