ಉಡುಪಿ :- ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲ ಇದರ 21ನೇ ವಾಷಿ೯ಕೋತ್ಸವ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ಫೆ.22 ರಂದು ನಡೆಯಿತು.ಮುಖ್ಯ ಅತಿಥಿ ಮಂಗಳೂರು ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಡಾII ಬಾಲಕಷ್ಣ ಶೆಟ್ಟಿ ಎಂ ಮಾತನಾಡಿ, ಇಂದಿನ ಶಿಕ್ಷಣ ಕೇವಲ ಜ್ಞಾನ ಮಾತ್ರ ನೀಡುತ್ತದೆ ವಿದ್ಯಾಥಿ೯ಗಳು ಇದನ್ನು ಉಪಯೋಗಿಸಿ ಬುದ್ಧಿವಂತರಾಗಬೇಕು.ಕಾಲೇಜು ಜೀವನ ಸಮಯ ವ್ಯಥ೯ದ ಕೇಂದ್ರವಲ್ಲ ಈ ಸಮಯದಲ್ಲಿ ನಾವು ಕಲಿತ ವಿಚಾರಗಳು ಅತ್ಯಂತ ಮಹತ್ವದಾಗಿದೆ ಎಂದರು.

IMG-20200227-WA0012

ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಟಿ.ಸುಧಾಕರ ಪೈ ವಹಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಆಡಳಿತಾಧಿಕಾರಿ ಪೊ.ದಯಾನಂದ ಶೆಟ್ಟಿ, ಪ್ರಾಂಶುಪಾಲೆ ರಾಧಿಕಾ ಪೈ, ವಿದ್ಯಾಥಿ೯ ಕ್ಷೇಮಪಾಲನಾಧಿಕಾರಿ ಅನಸೂಯ,ಹಳೆ ವಿದ್ಯಾಥಿ೯ ಸಂಘದ ಅಧ್ಯಕ್ಷ ರಾಘವೇಂದ್ರ ಪ್ರಭು, ಕವಾ೯ಲು ಕಾಲೇಜಿನ ವಿದ್ಯಾಥಿ೯ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು ನಂತರ ಸಾಂಸ್ಕತಿಕ ಕಾಯ೯ಕ್ರಮ ಸ್ಪಧಾ೯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

By suddi9

Leave a Reply

Your email address will not be published. Required fields are marked *