ಕುಪ್ಪೆಪದವು: ಕ್ರೀಡೆಗಳು ಮನುಷ್ಯನ ಆರೋಗ್ಯರಕ್ಷಣೆ ಮತ್ತು ಮಾನಸಿಕ ದ್ರಡತೆಗೆ ಸಹಕಾರಿಯಾಗಿವೆ ಎಂದು ಖ್ಯಾತ ಕಲಾ ನಿರ್ದೇಶಕ ,ರಂಗಕರ್ಮಿ ಶಶಿಧರ್ ಅಡಪ ಹೇಳಿದ್ದಾರೆ ,ಅವರು ,ಕೇಸರಿ ಫ್ರೆಂಡ್ಸ್ ಚಂದ್ರಮಜಲು ಮುತ್ತೂರು ಮಂಗಳೂರು ತಾಲೂಕು ಇದರ ವತಿಂದ ಬಡ ಕುಟುಂಬಕ್ಕೆ ಮನೆ ನಿರ್ಮಾಣದ ಸಹಾಯಾರ್ಥವಾಗಿ ಆದಿತ್ಯವಾರ ಚಂದ್ರಮಜಲು ನಲ್ಲಿ ಆಯೋಜಿಸಲಾಗಿದ್ದ 2 ನೇ ವರ್ಷದ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು ,
ವಾಲಿಬಾಲ್ ಆಟ ದೇಹಕ್ಕೆ ಉತ್ತಮ ವ್ಯಾಯಾಮ ನೀಡುವ ಆಟವಾಗಿದ್ದು ,ನಮ್ಮ ದೇಶ ವಿಶ್ವದಲ್ಲಿ 131 ನೇ ಕ್ರಮಾಂಕದಲ್ಲಿದ್ದು ಯುವಜನತೆ ವಾಲಿಬಾಲ್ ನಲ್ಲಿ ದೇಶ ನಂಬರ್ ವನ್ ಸ್ಥಾನಕ್ಕೆ ಬರುವಂತೆ ಮಾಡ್ಬೇಕು ,ಬಡಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಉದ್ದೇಶದಿಂದ ಪಂದ್ಯಾಟವನ್ನು ಆಯೋಜಿಸಿದ ಕೇಸರಿ ಫ್ರೆಂಡ್ಸ್ ಕಾರ್ಯವನ್ನು ಶ್ಲಾಘಿಸಿದರು,ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಅವರು ಮಾತನಾಡಿ ಚಂದ್ರಮಜಲಿನಂತಹ ಗ್ರಾಮೀಣ ಪ್ರದೇಶದಲ್ಲಿ ಬಡ ಕುಟುಂಬಕ್ಕೆ ನೆರವಾಗುವ ಒಂದು ಸದುದ್ದೇಶದಿಂದ ವಾಲಿಬಾಲ್ ಪಂದ್ಯಾಟ ಆಯೋಜಿಸಿರುವ ಕೇಸರಿ ಫ್ರೆಂಡ್ಸ್ ಈ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದಕ್ಕಾಗಿ ಅಭಿನಂದಿಸಿ ಶುಭಹಾರೈಸಿದರು,
ದೀಪ ಬೆಳಗಿಸಿ,ವಾಲಿಬಾಲ್ ಆಡುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಲಾಯಿತು ,ಜಾನಪದ ಕಲಾವಿದ ಗೋಪಾಲ ಕರ್ಕೇರ,ಕುಪ್ಪೆಪದವು ಯುವವಾಹಿನಿ ಅಧ್ಯಕ್ಷ ,ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಅಜಯ್ ಅಮೀನ್ ನಾಗಂದಡಿ,ಉಮಾನಾಥ್ ಚಂದ್ರಮಜಲು ಸಭೆಯನ್ನುದ್ದೇಶಿಸಿ ಮಾತನಾಡಿದರು,ಮುತ್ತೂರು ಪಂಚಾಯತ್ ಸದಸ್ಯರಾದ ತಾರಾನಾಥ್ ಕುಲಾಲ್ಯು,ಶ್ರೀಮತಿ ಸರಸ್ವತಿ,ಯುವ ಉದ್ಯಮಿ ಭಾಸ್ಕರ್ ಕುಲಾಲ್,ಜನಾರ್ಧನ ಒಡ್ಡೂರು,ಕೇಸರಿ ಫ್ರೆಂಡ್ಸ್ ಅಧ್ಯಕ್ಷ ರಾಜೇಶ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಕೇಸರಿ ಫ್ರೆಂಡ್ಸ್ ನ ಪದಾಧಿಕಾರಿಗಳು ,ಸದಸ್ಯರು ಹಾಜರಿದ್ದರು ಜಾನಪದ ಕಲಾವಿದ ಗೋಪಾಲ ಕರ್ಕೇರ,ಪಂಚಾಯತ್ ಸದಸ್ಯರಾದ ತಾರಾನಾಥ್ ಕುಲಾಲ್ ,ಶ್ರೀಮತಿ ಸರಸ್ವತಿ ಅವರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು,ಲೋಕೇಶ್ ಸಾಲ್ಯಾನ್ ಚಂದ್ರಮಜಲು ,ಸ್ವಾಗತಿಸಿ ,ಪ್ರಾರ್ಥನೆ ನೆರವೇರಿಸಿದರು , ವಿಕ್ರಮ್ ಒಡ್ಡೂರು ನಿರೂಪಿಸಿ ಉದಯ ಸಾಲ್ಯಾನ್ ವಂದಿಸಿದರು.