ರಾಷ್ಟ್ರೀಯ ಸ್ವಯಂಸೇವಕ ಸಂಘದ 2ನೇ ಸರಸಂಘಚಾಲಕ ಶ್ರೀ ಮಾಧವ ಸದಾಶಿವರಾವ್ ಗೋಳ್ವಲ್ಕರ್ ಇವರಜನ್ಮದಿನದ ಅಂಗವಾಗಿ ಶಿಶುಮಂದಿರ ಹಾಗೂ ಪೂರ್ವಗುರುಕುಲದಪುಟಾಣಿಗಳ ಪ್ರತಿಭಾದಿನೋತ್ಸವ, ಭಾರತಮಾತಾ ಪೂಜನ್, ಸಾಮೂಹಿಕ ಸಾಮರಸ್ಯ ಸಹಭೋಜನಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರೌಢಶಾಲಾ ಮಾತಾಜಿ ಸೌಮ್ಯ ಶ್ರೀ ಗೂರೂಜಿಯವರಜೀವನ ಸಂಸ್ಮರಣೆಯನ್ನು ಮಾಡಿದರು.ಶಿಶುಮಂದಿರ ಮತ್ತು ಪೂರ್ವಗುರುಕುಲದ ಮಕ್ಕಳು ವಿವಿಧ ಸಾಂಸ್ಕ್ರತಿಕಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಭಾಕಾರ್ಯಕ್ರಮದ ನಂತರ ಸಾಮರಸ್ಯಸಹಭೋಜನ ನೆರವೇರಿತು.
ವಿದ್ಯಾಕೇಂದ್ರದ ಸುತ್ತಮುತ್ತಲಿನ 236 ಮನೆಗಳಿಂದ ಅನ್ನ, 254 ಮನೆಗಳಿಂದ ಪಲ್ಯ, 279 ಮನೆಗಳಿಂದ ಪಾಯಸ,200ಮನೆಗಳಿಂದಕೊಬ್ಬರಿ ಮಿಠಾಯಿಗಳನ್ನು, 100 ಮನೆಗಳಿಂದ ತೆಂಗಿನಕಾಯಿ, 25 ಮನೆಗಳಿಂದ ತರಕಾರಿ, 51 ಮನೆಗಳಿಂದ ಉಪ್ಪಿನಕಾಯಿ, 150 ಮನೆಗಳಿಂದ ಬಾಳೆ ಎಲೆ, 40 ಮನೆಗಳಿಂದ ಮಜ್ಜಿಗೆತಂದು ವಿದ್ಯಾರ್ಥಿಗಳು ಪೋಷಕರು ಸಹಕರಿಸಿದರು. ಮಾತೆಯರು ತಯಾರಿಸಿ ತಂದಿದ್ದ ಭೋಜನವನ್ನುಕಾರ್ಯಕ್ರಮ ಮುಗಿದ ಬಳಿಕ ಎಲ್ಲರಿಗೆ ಬಡಿಸಿಸಲಾಯಿತು.
ರಿರುವವರೆಲ್ಲರೂಒಟ್ಟಿಗೆ ಕುಳಿತು ಸಹಭೋಜನದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ 2000ಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸಿದ್ದರು. ಮುಖ್ಯಅತಿಥಿಯಾಗಿಡಾ|| ಅಶ್ವಿನ್ ಬಾಳಿಗಾ ಮಕ್ಕಳ ತಜ್ಞರು, ವಿದ್ಯಾಕೇಂದ್ರದಅಧ್ಯಕ್ಷರಾದಬಿ. ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದರಮೇಶ್ಎನ್, ಡಾ||ಕಮಲಾ ಭಟ್ ಉಪಸ್ಥಿತರಿದ್ದರು.ಸಾಂಸ್ಕøತಿಕಕಾರ್ಯಕ್ರಮವನ್ನು ಸಂಪ್ರಿಯಾಕುಶಾಲಪ್ಪಅಮ್ಟೂರು ನಿರ್ವಹಿಸಿದರು, ಸಭಾಕಾರ್ಯಕ್ರಮವನ್ನುವಿದ್ಯಾಜಯರಾಮ್ ನಿರೂಪಿಸಿ, ಸೌಮ್ಯಜಯರಾಮ್ ಸ್ವಾಗತಿಸಿ, ಶಿಲ್ಪಾ ವಂದಿಸಿದರು.
