ಬಂಟ್ವಾಳ: ತಾಯಿ ನೆಲ ಮತ್ತು ತಾಯಿ ನುಡಿ ಪ್ರತಿಯೊಬ್ಬನಲ್ಲೂ ಹೃದಯಾಂತರಾಳದ ಪ್ರೇಮವನ್ನು ಹೊರಹೊಮ್ಮಿಸುತ್ತದೆ. ದೇಹಕ್ಕೆ ಹೃದಯದಂತೆ ಮಾತೃ ಭಾಷೆಯು ಶ್ರೇಷ್ಠವಾದುದು. ಯಾಕೆಂದರೆ ಅದು ಹೃದಯದ ಭಾಷೆ ಎಂದು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಹೇಳಿದರು.
ಶನಿವಾರ ಬಂಟ್ವಾಳ ಎಸ್ ವಿ ಎಸ್ ಕಾಲೇಜಿನಲ್ಲಿ ನಡೆದ ಮಾತೃ ಭಾಷಾ ದಿವಸ್ ಆಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾತೃ ಭಾಷೆ ಅದು ನಮ್ಮ ಸಂಸ್ಕೃತಿಯ ಸಂಕೇತ. ಮಾತೃ ಭಾಷಾ ಬೆಳವಣಿಗೆಯಿಂದ ಸಂಸ್ಕೃತಿ ಬೆಳೆಯಲು ಸಾಧ್ಯ. ನಮ್ಮ ಸಂಸ್ಕೃತಿ ಪರಂಪರೆಗಳ ಅರಿವು ನಮಗಿರಬೇಕು. ಆದರೆ ಜಾಗತಿಕ ಯುಗವಾದ ಇಂದು ಇತರ ಭಾಷೆಗಳಿಂದ ನಮ್ಮ ತಾಯಿ ನುಡಿ ಮಾಯವಾಗುತ್ತಿದೆ ಇದು ವಿಷಾಧಿಸಿದರು. .ಮಾತೃ ಭಾಷಾ ದಿವಸದ ಅಂಗವಾಗಿ ಮಾತೃ ಭಾಷೆಯ ಅಮೂಲ್ಯ ಗ್ರಂಥಗಳ ಪುಸ್ತಕ ಪ್ರದರ್ಶನ ನಡೆಯಿತು.ಗ್ರಂಥಪಾಲಕಿ ಗೀತಾ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಕಿಟ್ಟು ರಾಮಕುಂಜ ವಂದಿಸಿದರು. ಉಪನ್ಯಾಸಕರು, ಶಿಕ್ಷಕೇತರರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

