ಬಂಟ್ವಾಳ,: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಗೆ ಸಮಸ್ತ ದೇವಾಡಿಗ ಸಮಾಜದಿಂದ ಸುಮಾರು ೪೦ ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಷಷ್ಠಿರಥವನ್ನು ಮಾ. ೧೧ರಂದು  ಸಮರ್ಪಣೆಗೊಳಿಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ರಾಮದಾಸ್ ಬಂಟ್ವಾಳ ಹೇಳಿದರು.
IMG_20200222_115020ಅವರು ಶನಿವಾರ ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪೊಳಲಿಯ ಕಾಷ್ಠಶಿಲ್ಪಿ ಗಣೇಶ್ ಆಚಾರ್ಯ ಅವರ ನೇತೃತ್ವದ ತಂಡ ಪೊಳಲಿಯಲ್ಲಿ ರಥ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಈಗಾಗಲೇ ಬಹುತೇಕ ಕಾರ್ಯ ಪೂರ್ಣಗೊಂಡಿದೆ ಎಂದರು. ಸುಮಾರು ಏಳುಕೋಲು ಒಂದು ಅಂಗುಲ ಎತ್ತರದ ಈರಥಕ್ಕೆ ಸಾಗುವಾನಿ, ಬೋಗಿ, ಹೆಬ್ಬಲಸು ಹಾಗೂ ಸಂಪಿಗೆ ಹೀಗೆ ನಾಲ್ಕು  ಜಾತಿಯ ಮರಗಳನ್ನು ಬಳಸಲಾಗಿದೆ. ರಥ ಕಟ್ಟುವುದಕ್ಕೆ ಬೆತ್ತವನ್ನೂ ಕೂಡ ಸಮುದಾಯದ ವತಿಯಿಂದಲೇ ಸುಬ್ರಹ್ಮಣ್ಯದಿಂದ ತರಿಸಲಾಗಿದೆ ಎಂದರು. ಪೊಳಲಿ ಕ್ಷೇತ್ರದಲ್ಲಿ ರಥಕಟ್ಟುವ ಕಾರ್ಯ ನಿರ್ವಹಿಸುವ ದೇವಾಡಿಗ ಸಮುದಾಯವು ಷಷ್ಠಿರಥದಲ್ಲಿ ಒಡಕಿರುವುದನ್ನು ಕಂಡು ಸಮಾಜದಿಂದ ಕ್ಷೇತ್ರಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ರಥ ಸಮರ್ಪಣೆಗೆ ನಿರ್ಧರಿಸಲಾಗಿತ್ತು. ಹೀಗಾಗಿ ಕ್ಷೇತ್ರದಲ್ಲಿ ವರ್ಷಕ್ಕೆ ೫ ಬಾರಿ ಎಳೆಯುವಂತಹ ಷಷ್ಠಿ ರಥವನ್ನು ಆಯಕ್ಕೆ ಅನುಗುಣವಾಗಿ ನಿರ್ಮಿಸುವ ಕಾರ್ಯ ನಡೆದಿದೆ. ಈ ರಥದ ನಿರ್ಮಾಣಕ್ಕೆ ದೇವಾಡಿಗ ಸಮಾಜದ ಜೊತೆಗೆ ಸಮಸ್ತ ಹಿಂದೂ ಸಮಾಜದ ಬಂಧುಗಳು ದೇಣಿಗೆ ರೂಪದಲ್ಲಿ ಸಹಕರಿಸಿದ್ದಾರೆ ಎಂದರು.ಮಾ. ೧೧ರಂದು ರಥ ಸಮರ್ಪಣೆಗೆ ಪೂರ್ವಭಾವಿಯಾಗಿ ಮಾ. ೮ರಂದು ಹೊರೆಕಾಣಿಕೆಯ ಭವ್ಯವಾದ ಮೆರವಣಿಗೆ ನಡೆಯಲಿದೆ, ಮಾ. ೯ರಂದು ಶಿಲ್ಪಿಗಳಿಂದ ನೂತನ ಷಷ್ಠಿರಥ ಸ್ವೀಕಾರ, ಮಾ. ೧೦ರಂದು ವಿವಿಧ ವೈದಿಕ ಕಾರ್ಯಗಳು ಜರಗಲಿದೆ. ಮಾ. ೧೧ರಂದು ಬೆಳಗ್ಗೆ ೬ರಿಂದ ರಾತ್ರಿ ೨ರ ವರೆಗೆ ಸಮರ್ಪಣೆಯ ಕಾರ್ಯಕ್ರಮ ಜರಗುತ್ತದೆ. ಬೆಳಗ್ಗೆ ೮ಕ್ಕೆ ರಥ ಸಮರ್ಪಣಾ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದಾರೆ. ಬೆಳಗ್ಗೆ ೧೧ರ ಶುಭ ಮುಹೂರ್ತದಲ್ಲಿ ಶ್ರೀ ದೇವಿಗೆ ನೂತನ ಷಷ್ಠಿರಥ ಸಮರ್ಪಣೆ, ರಥೋತ್ಸವ ಜರಗುತ್ತದೆ. ಸಂಜೆ ೩ಕ್ಕೆ ಕೃತಜ್ಞತಾ ಸಭೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಡಾ| ಎಂ.ವೀರಪ್ಪ ಮೊಯಿಲಿದಂಪತಿ, ದ.ಕ.ಸಂಸದ ನಳಿನ್‌ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಉತ್ಸವ ಮಾದರಿಯಲ್ಲಿ ಈ ಕಾರ್ಯಕ್ರಮ ಜರಗಲಿದ್ದು,ದೇವಾಡಿಗ ಮಾತ್ರವಲ್ಲ ಸಮಸ್ತ ಹಿಂದೂ ಸಮಾಜ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸುವಂತೆ ಅವರು ಈ ಸಂದರ್ಭ ವಿನಂತಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಮಿತಿ ಪದಾಧಿಕಾರಿಗಳಾದ  ಪ್ರವೀಣ್ ಬಿ.ತುಂಬೆ, ಚಂದ್ರಾವತಿ ದೇವಾಡಿಗ, ದಾಮೋದರ ದೇವಾಡಿಗ, ಮುರಳಿ ದೇವಾಡಿಗ, ಪ್ರಶಾಂತ್ ದೇವಾಡಿಗ, ರೋಹಿತಾಕ್ಷ ದೇವಾಡಿಗ ಉಪಸ್ಥಿತರಿದ್ದರು.

Attachments area

 

By suddi9

Leave a Reply

Your email address will not be published. Required fields are marked *