ಬಂಟ್ವಾಳ:ಮಾಣಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು, ಪರಾಜಿತ ಅಭ್ಯರ್ಥಿಗಳು ಹಾಗೂ ವಲಯ ಬೂತ್ ಅಧ್ಯಕ್ಷರ ಸಭೆಯ ಮಾಣಿಯಲ್ಲಿ ನಡೆಯಿತು. ಮಾಜಿ ಸಚಿವ ರಮಾನಾಥ ರೈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಮುಂಬರುವ ಗ್ರಾಪಂ,ತಾಪಂ,ಜಿಪಂ ಚುನಾವಣೆ ದೃಷ್ಠಿಯಲ್ಲಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸುವಲ್ಲಿ ಕಾರ್ಯಕರ್ತರು ಪಣತೊಡಬೇಕು,

IMG-20200218-WA0114ರಾಜ್ಯ ಮತ್ತು ಕೇಂದ್ರಸರಕಾರದ ಜನವಿರೋಧಿ ನೀತಿಯನ್ನು ಕಾರ್ಯಕರ್ತರು ಮನೆ,ಮನೆಗೆ ತಲುಪಿಸಿ ಪಕ್ಷದ ಬಲವರ್ಧನೆಗೊಳಿಸಬೇಕು ಎಂದು ಕರೆನೀಡಿದರು. ಈ ಸಂದರ್ಭದಲ್ಲಿ ಪಾಣೆಮಂಗಳೂರು ಮತ್ತು ಬಂಟ್ವಾಳ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಮತ್ತು ಬೇಬಿ ಕುಂದರ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ,ಜಿಲ್ಲಾ ಪಂಚಾಯತ್ ಸದಸ್ಯರಾದ ಶ ಮಂಜುಳಾ ಮಾವೆ,ತಾಲೂಕು ಪಂಚಾಯತ್ ಸದಸ್ಯರಾದ ಮಂಜುಳಾ ಕುಶಲ ಪೆರಾಜೆ, ಶೋಭಾ ರೈ ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ ಪೂಜಾರಿ,ಮಾಣಿ ವಲಯ ಅಧ್ಯಕ್ಷರಾದ ಬಾಲಕೃಷ್ಣ  ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *