ಬಂಟ್ವಾಳ :ರಾಜ್ಯ ಸರ್ಕಾರದ ಯುವಜನ ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್ ವತಿಯಿಂದ ಬೆಂಗಳೂರು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಭಾರತದ ಪ್ರಪಥಮ ಮಿನಿ ಒಲಿಂಪಿಕ್ಸ್ ಗೇಮ್ಸ್-೨೦೨೦ರ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ  ಜಿಲ್ಲೆಯನ್ನು ಪ್ರತಿನಿಧಿಸಿದ  ಅನ್ಶಿ ಎನ್.ಮುಡಿಪು ಮತ್ತು ಅವ್ನಿ ಎನ್ ಮುಡಿಪು   ಚಿನ್ನ ಮತ್ತು ಬೆಳ್ಳಿಯ ಪದಕವನ್ನು  ಗಳಿಸಿದ್ದಾರೆ.
anshi
ಇವರು ಇನ್ಸ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಮಾರ್ಷಲ್ ಆರ್ಟ್ಸ್  ಮಂಗಳೂರು ವಿದ್ಯಾರ್ಥಿನಿಯರಾಗಿದ್ದು  ಸಂಸ್ಥೆಯ ಮುಖ್ಯ ಶಿಕ್ಷಕರಾದ ನಿತಿನ್ ಎನ್. ಸುವರ್ಣ ರಿಂದ ತರಬೇತಿಯನ್ನು  ಪಡೆಯುತ್ತಿದ್ದಾರೆ.  ಇವರು ದ.ಕ.ಜಿಲ್ಲಾ ಅಮೆಚ್ಯೂರ್ ಬಾಕ್ಸಿಂಗ್ ಅಸೋಸಿಯೇಶನ್ ವತಿಯಿಂದ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಮಾರ್ಚ್ ನಲ್ಲಿ  ಹರಿಯಾಣದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಖೇಲೋ ಇಂಡಿಯಾ ಬಾಕ್ಸಿಂಗ್ ಕ್ರೀಡಾಕೂಟಕ್ಕೆ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
avni

 

By Suddi9

Leave a Reply

Your email address will not be published. Required fields are marked *