ಕಲ್ಲಡ್ಕ:ಪೆರ್ನೆ ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯದಲ್ಲಿ ಸಂಸ್ಥೆಯ ಸ್ಥಾಪಕರಾದ ಬೆಳ್ಳಿಪ್ಪಾಡಿ ಅತ್ರಬೈಲು ದಿ.ರಾಮದಾಸ ರೈಯವರ ಪುಣ್ಯ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸೇವೆಗೈದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ಇಟ್ಟುಕೊಳ್ಳಲಾಯಿತು.ಮುಖ್ಯ ಅತಿಥಿಗಳಾಗಿ ಸಂತ ಜಾರ್ಜ್ ಪದವಿಪೂರ್ವ ವಿದ್ಯಾಲಯದ ಸಂಚಾಲಕ ಅಬ್ರಾಹಾಂ ವರ್ಗೀಸ್ ಪಾಲ್ಗೊಂಡು ದಿ.ರಾಮದಾಸ ರೈಯವರ ಶುಭ ಸಂಸ್ಮರಣೆ ಮಾಡಿದರು.

IMG-20200206-WA0057ಸಂಸ್ಥೆಯ ಸಂಚಾಲಕ ಟಿ.ಹರೀಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.ಉಜಿರೆಯ ರಬ್ಬರ್ ಮಾರಾಟ ಮತ್ತು ಸಂಸ್ಮರಣಾ ಸಹಕಾರಿ ಸಂಘದ ಹಿರಿಯ ಅಧಿಕಾರಿ ಎಂ.ಗಿರೀಶ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಬಾಲಸುಬ್ರಹ್ಮಣ್ಯ ಸಿ.ಎಸ್. ಗುರುಗಳಿಗೆ ಗುರುವಂದನೆ ಸಲ್ಲಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಐತಪ್ಪ ಸೇನವ, ಶಿವರಾಮ ಭಟ್ ಹೆಚ್., ಜಯಾನಂದ ರೈ ಯನ್., ಬಿ.ಗೋಪಾಲಕೃಷ್ಣ ಭಟ್ ಹಾಗೂ ಸದಾಶಿವ ಪೂಜಾರಿ ಎಸ್. ಇವರಿಗೆ ಆಡಳಿತ ಮಂಡಳಿಯಿಂದ ಗೌರವ ಸನ್ಮಾನ ನೀಡಲಾಯಿತು.ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ತಾರನಾಥ ಶೆಟ್ಟಿ ಎಚ್., ಸ್ವಾಗತಿಸಿ ನಿವೃತ್ತ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಪ್ರಾಂಶುಪಾಲ ಶೇಖರ ರೈ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕರುಗಳಾದ ಸುಧಾಕರ ರೈ ಎಸ್., ಚೆನ್ನಕೇಶವ ಡಿ.ಆರ್., ಉದಯ ಎಸ್, ಶ್ರೀಮತಿ ಇಂದಿರಾ, ಸತ್ಯನಾರಾಯಣ ರೈ ಕೆ. ಇವರು ನಿವೃತ ಶಿಕ್ಷಕರ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಚಂದ್ರಹಾಸ ರೈ ವಂದಿಸಿದರು. ಉಪನ್ಯಾಸಕ ಗಣೇಶ ರೈ ಎಂ. ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *