ಎಫ್ ಅಬ್ಬಾಸ್ (80 ವರ್ಷ ) ಜನ ಸಂಘ ದ ಕಾಲ ದಿಂದ ಪಕ್ಷದ ಕಾರ್ಯಕರ್ತ ನಾಗಿ , ರಾಜ್ಯ ಬಿ ಜೆ ಪಿ ಕಾರ್ಯಕಾರಿಣಿ ಸದಸ್ಯ ರಾಗಿ ಸೇವೆ ಸಲ್ಲಿಸಿದ್ದರು . ಪಕ್ಷದ ವಿವಿದ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅಬ್ಬಾಸ್ ರವರು ತನ್ನ ಇಳಿ ವಯಸ್ಸಿನಲ್ಲಿ ಕೃಷಿ ಮತ್ತು ಹೈನುಗಾರಿಕೆ ಯನ್ನು ನಡೆಸಿಕೊಂಡಿದ್ದರು , ಅಲ್ಪ ಸಮಯದ ಅನಾರೋಗ್ಯ ದಿಂದ ಖಾಸಗಿ ಆಸ್ಪತ್ರೆ ಯಲ್ಲಿ ಕೊನೆ ಉಸಿರೆಳೆದರು ಪತ್ನಿ ತನ್ನ 3 ಹೆಣ್ಣು ಮಕ್ಕಳು ಸಹಿತ ಅಪಾರ ಬಂದು ಬಳಗ , ಅಭಿಮಾನಿಗಳನ್ನು ಅಗಲಿದರು .
ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕರಾದ ಕೊಡಮಣ್ಣು ಕಾಂತಪ್ಪ ಶೆಟ್ಟಿ , ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ,ಗಣ್ಯರುಗಳಾದ ಪುಂಚಮೆ ಪದ್ಮನಾಭ ಶೆಟ್ಟಿ , ದಿನೇಶ್ ಶೆಟ್ಟಿ ಕೊಟ್ಟಿಂಜ , ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮ್ಲಾನ ಮಾರಿಪಳ್ಳ , ಪುದು ಪಂಚಾಯತ್ ಮಾಜಿ ಅಧ್ಯಕ್ಷ ಅಕ್ತರ್ ಹುಸೈನ್ , ಅಶ್ರಫ್ ಫರಂಗಿಪೇಟೆ , ವಿ ಎಚ್ ಕೆರೀಂ , ಮತ್ತಿತರರು ಸಂತಾಪ ಸೂಚಿಸಿದರು
