ಬಂಟ್ವಾಳ: ತುಂಬೆ ನೂತನ ಡ್ಯಾಂನಲ್ಲಿ 7 ಮೀಟರ್ ನೀರು ಸಂಗ್ರಹಿಸಲು ಮಂಗಳೂರು ಮಹಾನಗರಪಾಲಿಕೆಯ ವತಿಯಿಂದ ಮುಳುಗಡೆ ಜಮೀನಿನ ಸರ್ವೆ ಕಾರ್ಯಕ್ಕೆ ಅಗಮಿಸಿದ ಸಿಬಂದಿಗಳಿಗೆ ರೈತರು ತಡೆಒಡ್ಡಿದ ಘಟನೆ ಬಂಟ್ವಾಳ ತಾ.ನ ಸಜೀಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಎಂಬಲ್ಲಿ ನಡೆದಿದೆ.
ಈಗಾಗಲೇ ಐದು ಹಾಗೂ ಆರು ಮೀಟರ್ ನೀರು ಸಂಗ್ರಹಿಸಿದಾಗ ಸಂತ್ರಸ್ತ ರೈತರಿಗೆ ಎಲ್ಲಾ ದಾಖಲೆಗಳನ್ನು ಒದಗಿಸಿದರೂ ಇದುವರೆಗೂ ಪರಿಹಾರ ಸಿಕ್ಕಿಲ್ಲ ಹಾಗೂ ಸರ್ವೇಯ ಬಗ್ಗೆಯು ಜಮೀನುದಾರರಿಗೆ ಪೂರ್ವ ಮಾಹಿತಿ ನೀಡಿ ಸರ್ವೇ ಕಾರ್ಯ ನಡೆಸಬೇಕೆಂದು ಸರ್ವೇ ಸಿಬಂದಿಗಳಿಗೆ ರೈತರು ಸೂಚಿಸಿ ತಡೆಒಡ್ಡಿದರು. ಬಂಟ್ವಾಳ ತಾಲೂಕು ರೈತ ಸಂಘ ಅಧ್ಯಕ್ಷ , ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಂತ್ರಸ್ತ ರೈತರು ಒಟ್ಟು ಸೇರಿ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದ ಸಿಬ್ಬಂದಿಗಳಿಗೆ ತಡೆಒಡ್ಡಿ ವಾಪಾಸ್ ಕಳುಹಿಸಿದರು ರೈತ ಮುಖಂಡರಾದ ಲಕ್ಷ್ಮಣ ನರಿಕೊಂಬು ಸುದೇಶ್ ಮೈಯ್ಯ ಪಾಣೆಮಂಗಳೂರು ಇದ್ದಿನಬ್ಬ ಕೊಪ್ಪಳ, ನಂದಾವರ ಅಣ್ಣಪ್ಪಯ್ಯ ಇಕ್ಬಾಲ್ ಪಡ್ಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ಶಿವರಾಮ ಬಾಸ್ರೀ ತ್ತಾಯ, ಧನಂಜಯ ಶೆಟ್ಟಿ ಪರಾರಿಗುತ್ತು ಪ್ರಸಾದ್ ಶೆಟ್ಟಿ, ಧೀರಜ್ ಶೆಟ್ಟಿ, ಚಿತ್ರ ಎಸ್ ರೈ, ಅಬ್ದುಲ್ ರಹಿಮಾನ್ ಉದ್ದೊಟ್ಟು ಮೊದಲಾದವರು ಉಪಸ್ಥಿತರಿದ್ದರು.