ಬಂಟ್ವಾಳ: ಧಾರ್ಮಿಕ ಶೃದ್ದಾ ಭಕ್ತಿಯಿಂದ ತುಳುನಾಡಿನ ಸಕಲ ಸಂಸ್ಕ್ರತಿ ಉಳಿಸಲು ಸಾಧ್ಯವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಸಾಮರಸ್ಯ ಸಂಯೋಜಕ ಸುರೇಶ್ ಪರ್ಕಳ ಹೇಳಿದರು.ಬಿ.ಸಿ.ರೋಡಿನ ಕಾಮಾಜೆ ನವೋದಯ ಯುವಕ ಸಂಘದ ೩೦ನೇ ವಾರ್ಷಿಕೋತ್ಸವದ ಅಂಗವಾಗಿ ಜರಗಿದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ  ಧಾರ್ಮಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
1.
 ಗುರು ಹಿರಿಯರಿಗೆ ಗೌರವ ನೀಡುವುದರೊಂದಿಗೆ ನಮ್ಮ ಮೂಲನಂಬಿಕೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಯುವ ಸಮುದಾಯ ಮುನ್ನಡೆಯಬೇಕು ಎಂದ ಅವರು ನವೋದಯ ಸಂಘವು ಸಂಘಟನೆಯ ಜೊತೆಯಲ್ಲಿ ಧರ್ಮ ರಕ್ಷಣೆಯ ಕಾರ್ಯದಲ್ಲಿ ತೊಡಗಿಸುತ್ತಿರುವುದು  ಶ್ಲಾಘನೀಯವಾಗಿದೆ ಎಂದು  ಹೇಳಿದರು.ಮುಖ್ಯ ಅತಿಥಿಯಾಗಿದ್ದ ಮಾಜಿ ಸೈನಿಕ, ಕೆನರಾ ಬ್ಯಾಂಕ್ ನಿವೃತ್ತ  ಮ್ಯಾನೇಜರ್ ಮುರಳೀಕೃಷ್ಣ ಸೋಮಯಾಜಿ ಅರ್ಬಿ ಮಾತನಾಡಿ, ಸರಕಾರ ಜಾರಿಗೆ ತರುವ ಎಲ್ಲಾ ಯೋಜನೆಗಳನ್ನು ಗ್ರಾಮೀಣ ಭಾಗದ  ಜನಸಾಮಾನ್ಯರಿಗೂ ತಲುಪಿಸುವಲ್ಲಿ   ಇಂತಹ ಸಂಘಟನೆಗಳು ಮುಂದಾಗಬೇಕು ಎಂದು  ಹೇಳಿದರು. ವೇದಿಕೆಯಲ್ಲಿ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಜೇಶ್ ಎಲ್.ನಾಯಕ್, ಬಂಟ್ವಾಳ ಪುರಸಭಾ ಸದಸ್ಯೆ ಶೋಭಾ ಹರೀಶ್ಚಂದ್ರ ಉಪಸ್ಥಿತರಿದ್ದರು.
ಯುವ ಕವಿ ಯತೀಶ್ ಕಾಮಾಜೆ ಹಾಗೂ ೧೦ನೇ ತರಗತಿ ಯಲ್ಲಿ ಅಪೂರ್ವ ಸಾಧನೆಗೈದ ವಿದ್ಯಾರ್ಥಿನಿ ನಿಶ್ಮಿತಾ ಕುಲಾಲ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಸ್ಥಳೀಯ ವಿಕಲಾಂಗ ೪ ಕುಟುಂಬಗಳಿಗೆ ಆರ್ಥಿಕ ಧನ ಸಹಾಯ ನೀಡಲಾಯಿತು.  ಸಂಘದ ಅಧ್ಯಕ್ಷ ಭಾಸ್ಕರ ಟೈಲರ್‍ ಕಾಮಾಜೆ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕುಲಾಲ್ ಮೈರಾನದ ಪಾದೆ, ಜೊತೆ ಕಾರ್ಯದರ್ಶಿಗಳಾದ ವಿಜಯ ಮೈರಾನ್ ಪಾದೆ, ರಾಜೇಶ್ ಭಂಡಾರಿ ಮೈರಾನ್ ಪಾದೆ, ಕೋಶಾಧಿಕಾರಿ ವಿನೋದ್ ಕುಮಾರ್‍ ಕಾಮಾಜೆ ಉಪಸ್ಥಿತರಿದ್ದರು.ಸದಸ್ಯ ಬಾಲಕೃಷ್ಣ ಕಾಮಾಜೆ ಸ್ವಾಗತಿಸಿ, ಜಯಂತ್ ಕುಲಾಲ್ ಕಾಮಾಜೆ ವಂದಿಸಿದರು.
ಸಂಘದ ಉಪಾಧ್ಯಕ್ಷ ಉಮೇಶ್ ಮೈರಾನ್ ಪಾದೆ ಪ್ರಸ್ತಾವಿಸಿ, ಕಾರ್ಯಕ್ರಮ ನಿರೂಪಿಸಿದರು.ರಾತ್ರಿ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.

By suddi9

Leave a Reply

Your email address will not be published. Required fields are marked *