ಬಂಟ್ವಾಳ: ಮಾಣಿ ಕುಲಾಲ ಸೇವಾ ಸಂಘದ ನೂತನ ಸಭಾಭವನ ನಿರ್ಮಾಣದ ಸಹಾಯಾರ್ಥವಾಗಿ ಸ್ವಜಾತಿ ಭಾಂದವರಿಗೆ ಕುಂಬಾರ ಟ್ರೋಫಿ- 2020 ಕ್ರಿಕೆಟ್ ಪಂದ್ಯಾಟ ಬಂಟ್ವಾಳ ಎಸ್.ವಿ.ಎಸ್. ಪ್ರೌಢ ಶಾಲಾ ಮೈದಾನದಲ್ಲಿ ನಡೆಯಿತು.
ಮಂಗಳೂರು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ,ಕ್ರೀಡೆ ಆರೋಗ್ಯ ದೃಷ್ಟಿಯಿಂದ ಸಹಕಾರಿಯಾಗುತ್ತದೆ, ಜೊತೆಗೆ ಸಂಘಟನೆಯ ದೃಷ್ಟಿಯಿಂದಲು ಅಷ್ಟೇ ಪ್ರಭಾವ ಬೀರುತ್ತದೆ ಎಂದು ಹೇಳಿದರು. ಸಮಾಜ ಬಾಂಧವರನ್ನು ಕ್ರೀಡೆಯ ಮೂಲಕ ಒಗ್ಗೂಡಿಸಿ ಶಕ್ತಿ ಪ್ರದರ್ಶನದ ಜೊತೆಯಲ್ಲಿ ವ್ಯಕ್ತಿ ನಿರ್ಮಾಣದ ಕಾರ್ಯ ಸಮುದಾಯಕ್ಕೆ ಮಾದರಿಯಾಗಿದೆ ಎಂದ ಅವರು ಸಂಘಟನೆಯ ಮೂಲಕ ಪ್ರಬಲರಾಗಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಬೇಕೆಂದರು.
ಅದ್ಯಕ್ಷತೆಯನ್ನು ಮಾಣಿ ಕುಲಾಲ ಸೇವಾ ಸಂಘದ ಅಧ್ಯಕ್ಷ ಭೋಜನಾರಾಯಣ ಮೂಲ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಕರಾವಳಿ ಕುಲಾಲ,ಕುಂಬಾರರ ಯುವ ವೇದಿಕೆಯ ರಾಜ್ಯಾಧ್ಯಕ್ಷ ತೇಜಸ್ವಿರಾಜ್, ಕುಲಾಲೆರ್ ಕುಡ್ಲದ ಜಿಲ್ಲಾಧ್ಯಕ್ಷ ಅನಿಲ್ ದಾಸ್, ಮಂಗಳೂರು ಬರ್ಕೆ ಫ್ರೆಂಡ್ಸ್ ನ ಸ್ಥಾಪಕಾಧ್ಯಕ್ಷ ಯಜ್ಞೇಶ್ ಕುಲಾಲ್, ಮಾಣಿ ವಿನಾಯಕ ಬೋರ್ ವೆಲ್ ಮತ್ತು ಅರ್ಥಮೂವರ್ಸ್ ನ ಮಾಲಕ ಜಯರಾಮ ಕುಲಾಲ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕರಾವಳಿ ಕುಲಾಲ,ಕುಂಬಾರರ ಯುವ ವೇದಿಕೆಯ ಅದ್ಯಕ್ಷ ರೋ. ಸುಕುಮಾರ್ ಬಂಟ್ವಾಳ, ಉದ್ಯಮಿಗಳಾದ ಗೋಪಾಲ ಮೂಲ್ಯ ಎಸ್. ಶಂಭುಗ, ರಾಜಶೇಖರ್, ನಿವೃತ್ತ ಅಧ್ಯಾಪಕ ರಾಮಚಂದ್ರ ಮೂಲ್ಯ ಗಣೇಶನಗರ, ಕೆದಿಲ ಗ್ರಾ.ಪಂ. ಅಧ್ಯಕ್ಷ ಅಣ್ಣಪ್ಪ ಕುಲಾಲ್ ಪೇರಮೊಗರು, ನಿವೃತ್ತ ಸೈನಿಕ ಜನಾರ್ದನ ಕುಲಾಲ್, ಪಿ.ಡಬ್ಲೂಡಿ ಕಂಟ್ರಾಕ್ಟರ್ ಶಿವಪ್ರಸಾದ್ ಕುಲಾಲ್ ಪೆರಾಜೆ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪಾಣೆಮಂಗಳೂರಿನ ಹರಿಯಪ್ಪ ಬಿ.ಮೂಲ್ಯ, ಛಾಯಾಗ್ರಾಹಕ ಹರೀಶ್ ಕುಲಾಲ್ ಮಾಣಿ, ಮಂಗಳೂರು ಸಿವಿಲ್ ಇಂಜಿನಿಯರ್ ಬಾಲಾಕೃಷ್ನ ಕುಲಾಲ್ ಪೆರಾಜೆ, ಮಾಧವ ಕುಲಾಲ್, ಮಾಣಿ ಸಿವಿಲ್ ಕಂಟ್ರಾಕ್ಟರ್ ರಾಜೇಶ್ ಕೊಪ್ಪಲ, ನರೇಂದ್ರ ಮೂಲ್ಯ,
ಮಾಣಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಾಗೇಶ್ ಮಾಣಿ, ಮಾಣಿ ಕುಲಾಲ ಸಂಘದ ಪಿ.ಪದ್ಮನಾಭ ಕುಲಾಲ್, ರಾಜೀವಿ ಚೆನ್ನಪ್ಪ ಕುಲಾಲ್, ಉಪ್ಪಿನಂಗಡಿ ಸುಶೀಲಾ ಆನಂದ ಕುಲಾಲ್, ಮಾಣಿ ಕುಲಾಲ ಮಹಿಳಾ ಸಂಘದ ಕಾರ್ಯದರ್ಶಿ ಸೌಭಾಗ್ಯ ನಾರಾಯಣ ಕುಲಾಲ್, ಸಂಘದ ಕ್ರೀಡಾ ಕಾರ್ಯದರ್ಶಿ ಪ್ರಶಾಂತ್ ಕುಲಾಲ್ ಶಂಭುಗ, ಹರೀಶ್ ಕರಿಮಜಲು, ಕೋಶಾಧಿಕಾರಿ ಸದಾಶಿವ ಕುಲಾಲ್ ಮಾಣಿ, ಉಪಸ್ಥಿರಿದ್ದರು. ಕಾರ್ಯದರ್ಶಿ ಪದ್ಮನಾಭ ಕುಲಾಲ್ ಕೊಮ್ಮಕೋಡಿ ಸ್ವಾಗತಿಸಿ ,ವಂದಿಸಿದರು.

