ಮೂಡುಬಿದಿರೆ: ಯುವ ಕವಿ ಇಂದುಚೇತನ ಬೋರುಗುಡ್ಡೆ ಅವರ ಎರಡನೇ ಕವನ ಸಂಕಲನ `ಅವಳೂ ನೀರೆ’ ಫೆ.9ರಂದು ಸಾಯಂಕಾಲ 4 ಗಂಟೆಗೆ ಅಳಿಯೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಡುಗಡೆಗೊಳಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರು ಕವನ ಸಂಕಲನವನ್ನು ಬಿಡುಗೊಳಿಸುವರು.

mbd_jan28_4 Indu Chetana ನಿವೃತ್ತ ಕನ್ನಡ ಉಪನ್ಯಾಸಕ ಎಂ. ಬಾಬು ಶೆಟ್ಟಿ ನಾರಾವಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿರುವರು. ವಾಗ್ಮಿ ಮುನಿರಾಜ ರೆಂಜಾಳ, ಮೂಡುಬಿದಿರೆ ಪೊಲೀಸ್ ಇನ್ಸ್‍ಪೆಕ್ಟರ್ ಬಿ.ಎಸ್ ದಿನೇಶ್ ಕುಮಾರ್, ಸಿನಿಮಾ, ರಂಗಭೂಮಿ ಕಲಾವಿದ ಬೋಜರಾಜ ವಾಮಂಜೂರು, ಮಹಾವೀರ ಹೆಗ್ಡೆ ಬಡಕೋಡಿಗುತ್ತು, ಅಳಿಯೂರು ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಬಿ. ಮುಖ್ಯ ಅತಿಥಿಗಳಾಗಿರುವರು.
ಅಕ್ಕರೆ ರಂಗ ಶಿಕ್ಷಣ ಕೇಂದ್ರ ಅಳಿಯೂರು ಅವರಿಂದ ಶಿಕ್ಷಕ ಮಹಾದೇವ ಮೂಡುಕೊಣಾಜೆ ನಿರ್ದೇಶನದಲ್ಲಿ `ಪ್ರತಿಜ್ಞಾ ಯೌಗಂಧರಾಯಣ’ ನಾಟಕ ಪ್ರದರ್ಶನಗೊಳ್ಳಲಿದೆ.

By suddi9

Leave a Reply

Your email address will not be published. Required fields are marked *