ಮೂಡುಬಿದಿರೆ:ಆರದಿರಲಿ ಬದುಕು ಆರಾಧನಾ ಸೇವಾ ಸಂಸ್ಥೆಯ ವತಿಯಿಂದ ಸರ್ಕಾರಿ ಶಾಲೆ, ಹಾಸ್ಟೆಲ್‍ಗಳಿಗೆ ವಿವಿಧ ಮಾಹಿತಿಗಳಿರುವ ಪುಸ್ತಕ ನೀಡುವ `ಗ್ರಂಥಾರಾಧನೆ’ ಯೋಜನೆಗೆ ಲಾಡಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿ ನಿಲಯದಲ್ಲಿ ಚಾಲನೆ ನೀಡಲಾಯಿತು.

ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಸದಸ್ಯೆ ಪ್ರದ್ಮಶ್ರೀ ಭಟ್ ನಿಡ್ಡೋಡಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜ್ಞಾನ ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರಿ ಹಾಗೂ ಕನ್ನಡ ಶಾಲೆಗಳನ್ನು ಗುರುತಿಸಿ, ಅಲ್ಲಿ ಮಿನಿ ಗ್ರಂಥಾಲಯ ಸ್ಥಾಪಿಸುವ ಯೋಜನೆ ಗ್ರಂಥಾರಾಧನೆಯಾಗಿದೆ. ಓದುಗರಿಂದ ಪುಸ್ತಕಗಳನ್ನು ಸಂಗ್ರಹಿಸಿ, ಶಿಕ್ಷಣ ಸಂಸ್ಥೆಗಳಿಗೆ ನೀಡುವ ಪ್ರಥಮ ಹಂತದ ಪ್ರಯತ್ನವನ್ನು ಪ್ರಾರಂಭಿಸಿದ್ದೇವೆ. ಇದಕ್ಕೆ ಪುಸ್ತಕ ಪ್ರೇಮಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು. ಸಂಸ್ಥೆಯ ಸದಸ್ಯರಾದ ಪ್ರಸಾದ್ ಕೊಡ್ಯಡ್ಕ, ಗುರುರಾಜ್ ಅಂಕೋಲ, ಬಸವರಾಜ್, ಮಣಿರತ್ನಂ, ಹಾಸ್ಟೆಲ್‍ನ ವಾರ್ಡನ್ ಪ್ರೀತಿ ಶೆಟ್ಟಿ ಉಪಸ್ಥಿತರಿದ್ದರು.
