ಮುಂಬಯಿ : ದೇರಳಕಟ್ಟೆಯ ರತ್ನ ಎಜುಕೇಶನ್ ಟ್ರಸ್ಟ್ ನವರು ನೀಡುವ 9ನೇ ಸಾಲಿನ ಪ್ರತಿಷ್ಟಿತ ರತ್ನೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಕರಾವಳಿಯ ವಿಶ್ವ ಪ್ರಸಿದ್ಧ ಜಾದೂಗಾರ ಕುದ್ರೋಳಿ ಗಣೇಶ್ ಇವರಿಗೆ ಪ್ರದಾನಿಸಿ ಗೌರವಿಸಲಾಯಿತು.

Kudroli Ganes Honour

ಇತ್ತೀಚೆಗೆ ಮಂಗಳೂರುನಲ್ಲಿ ಜರುಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ   ಪ್ರೊ| ಪಿ.ಎಸ್ ಎಡಪಡಿತ್ತಾಯ ಇವರು ಕುದ್ರೋಳಿ ಗಣೇಶ್ ಇವರಿಗೆ 2019-2020ನೇ ಸಾಲಿನ ಪ್ರತಿಷ್ಠಿತ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು. ಖ್ಯಾತ ಹಾಸ್ಯ ಲೇಖಕಿ  ಪ್ರೊ | ಭುವನೇಶ್ವರಿ ಹೆಗ್ಡೆ, ರತ್ನ ಟ್ರಸ್ಟ್‍ನ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *