ನವದೆಹಲಿ: ಬಲಿಷ್ಟ ಸೇನಾ ಶಕ್ತಿಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವು ಪ್ರಮುಖ ದೇಶವಾಗಿದೆ. ಇತ್ತೀಚೆಗೆ ಸ್ವದೇಶಿ ಉತ್ಪನ್ನಗಳ ಮೇಲೆ ಹೆಚ್ಚಿನ ಮಹತ್ವ ನೀಡುತ್ತಿರುವ ಭಾರತ ಇದೀಗ ಯುದ್ಧಕ್ಕೆ ಬೇಕಾದಂತಹ ರಕ್ಷಣಾ ಸಾಧನಗಳ ನಿರ್ಮಾಣದ ಮೂಲಕ ಬೇರೆ ದೇಶಗಳಿಂತ ನಾವೇನು ಕಮ್ಮಿ ಇಲ್ಲ ಎಂದು ತೋರಿಸಿ ಕೋಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಶತ್ರು ದೇಶಗಳು ಸಮುದ್ರದ ಮೂಲಕವೇ ದಾಳಿ ನಡೆಸಲು ಹೊಂಚು ಹಾಕುತ್ತಿದ್ದು ಅವರಿಗೆ ತಕ್ಕ ಪಾಠ ಕಲಿಸಿ ಮಟ್ಟಹಾಕಲು ಸಬ್‍ಮರೀನ್ ಧ್ವಂಸ ಮಾಡಬಲ್ಲ ಹೇವಿ ವೈಟ್ ಆಯಂಟಿ ಸಬ್‍ಮರೀನ್ ಟಾರ್ಪೆಡೋ ವರುಣಾಸ್ತ್ರ ಭಾರತೀಯ ಸೇನೆಯನ್ನು ಇನ್ನಷ್ಟು ಬಲಿಷ್ಠ ಗೋಳಿಸಲಿದೆ. ಹೌದು ವರುಣಾಸ್ತ್ರ ಎಂಬುವುದು ಜಲಂತಾರ್ಗಮಿ ಪ್ರತಿರೋಧಿತ ಸಬ್‍ಮರೀನ್ ಇದಾಗಿದೆ. ಡಿ ಆರ್ ಡಿ ಒ ನಲ್ಲಿರುವ ನೆವಲ್ ಸೈನ್ಸ್ ಆ್ಯಂಡ್ ಟೆಕ್ನಾಲಾಜಿಕಲ್ ಲ್ಯಾಬೋರೇಟರಿ ಇದನ್ನ ನಿರ್ಮಿಸಿದಲ್ಲದೆ 2018 ರಲ್ಲಿಯೇ ಇದರ ಟೆಸ್ಟ್ ಯಶಸ್ವಿಯಾಗಿತ್ತು.
ಸುಮಾರು 1500 ಕೆಜಿ ತೂಕವುಳ್ಳ ಈ ವರುಣಾಸ್ತ್ರ 250 ಕಿಲೋಗಳಿಗಿಂತಲೂ ಅಧಿಕ ಭಾರದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾರ್ಮಥ್ಯದ ಇದು 40 ಕಿ.ಮೀ.ದೂರದಲ್ಲಿರುವ ತನ್ನ ಗುರಿಯನ್ನು ಗಂಟೆಗೆ 74 ಕಿ.ಮೀ. ವೇಗದಲ್ಲಿ ತಲುಪಿ ಶತ್ರುಗಳ ಶಿಪ್ಗಳನ್ನ ಹೊಡೆದು ಹಾಕುವ ಬಲಿಷ್ಠ ಸಬ್‍ಮರೀನ್. ಇನ್ನು ಇದರಲ್ಲಿ ಜಿಪಿಎಸ್ ವ್ಯವಸ್ಥೆ ಇದ್ದು ವೈರಿಗಳ ಸಬ್‍ಮರೀನ್‍ಗಳು ಮತ್ತು ಇತರ ರಹಸ್ಯ ನೌಕೆಗಳನ್ನು ಗುರುತಿಸಿ ಅದರ ಜಾಡನ್ನು ಪತ್ತೆ ಮಾಡಿ ಗುರಿಯಿಟ್ಟು ವೈರಿ ನೆಲೆಗಳನ್ನು ನಿರ್ಣಾಮ ಮಾಡುವ ಸಾರ್ಮಥ್ಯಹೊಂದಿದೆ.
ಈ ಹಿಂದೆ ನೌಕಾಸೇನೆ DRDO ಬಳಿ ಒಟ್ಟು 1187 ಕೋಟಿ ರೂಪಾಯಿ ವೆಚ್ಚದಲ್ಲಿ 63 ಕ್ಷಿಪಣಿಗಳಿಗೆ ಬೇಡಿಕೆ ಇಟ್ಟಿತ್ತು. ಈ ಪೈಕಿ ಇದೀಗ ಮೊದಲ ಬ್ಯಾಚ್ನಲ್ಲಿ ಕೆಲ ಕ್ಷಿಪಣಿಗಳು ನೌಕಾಸೇನೆ ಸೇರಲಿದೆ.ಹಾಗು ಕೆಲವು ಜಲಾಂತರ್ಗಾಮಿ ಹಡಗುಗಳಿಗೆ ಇದನ್ನ ಅಳವಡಿಸಲಾಗುತ್ತೆ ಎಂದಿದಾರೆ. ಭಾರತೀಯ ನೌಕಾಪಡೆಯ ಬತ್ತಳಿಕೆಗೆ ಮತ್ತೊಂದು ಪ್ರಬಲ ಶಸ್ತ್ರಾಸ್ತ್ರ ಸೇರ್ಪಡೆಯಾಗಲಿರುವುದು ಸೇನೆಗೆ ಹೊಸ ಬಲ ಬಂದಂತಾಗಿದೆ.


