ಕೈಕಂಬ:ಕರ್ನಾಟಕ ಸರಕಾರದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಶ್ರೀಕ್ಷೇತ್ರ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ಇದರ ಸಹಭಾಗಿತ್ವದಲ್ಲಿ 2019-20ನೇ ಶಾಲಿನ ಐ ಇ ಸಿ ಕಾರ್ಯಕ್ರಮಗಳಡಿಯಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಜ. 10ರಂದು ಶುಕ್ರವಾರ ಪೊಳಲಿ ಸರ್ವಮಂಗಳಾ ಸಭಾಗ್ರಹದಲ್ಲಿ ನಡೆಯಿತು.
ಶಿಬಿರ ಉದ್ಘಾಟಿಸಿದ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಆಯಷ್ಮಾನ್ ಮೂಲಕ ಸರ್ಕಾರ ಜನರಿಗೆ ಉಚಿತ ಹಾಗೂ ಉತ್ತಮ ಔಷಧಿ ಒದಗಿಸುತ್ತಿದೆ. ಇದು ಗ್ರಾಮೀಣ ಮಟ್ಟದಲ್ಲೂ ವಿಸ್ತರಣೆಗೊಳ್ಳಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದೆ. ಗ್ರಾಮೀಣರಿಗೆ ಇದರ ಪರಿಚಯ ಮಾಡಿಸಬೇಕು. ಇದರಿಂದ ಯಾವುದೇ ಸೈಡ್ ಇಫೆಕ್ಟ್ ಇಲ್ಲ. ಇದರ ಪರಿಣಾಮಕಾರಿ ಅನುಷ್ಠಾನದಲ್ಲಿ ಆಶಾ ಕಾರ್ಯಕರ್ತರು ಪಾತ್ರ ಮಹತ್ವದ್ದಾಗಿದೆ. ಇಂದು ಬಡವರಿಗೆ ಖಾಸಗಿ ಆಸ್ಪತ್ರೆಗಳು ದುಬಾರಿಯಾಗಿವೆ. ಈ ನಿಟ್ಟಿನಲ್ಲಿ ಸರ್ಕಾರದ ಈ ಕಾರ್ಯಕ್ರಮ ಸದುಪಯೋಗವಾಗಬೇಕು ಎಂದರು.
*ಕ್ಯಾಲೆಂಡರ್ ವಿಶೇಷತೆಔಷಧೀಯ ಗಿಡ….!!
ಈ ಕ್ಯಾಲೆಡರ್‍ನ ವಿಶೇಷತೆ ಏನೆಂದರೆ ಪ್ರತೀ ತಿಂಗಳಿನ ಮಾಸಿಕ ಕ್ಯಾಲೆಂಡರ್ ಹಾಳೆಯನ್ನು ಹರಿದು ಮಣ್ಣಿನನಲ್ಲಿ ಹಾಕಿ ನೀರುಣಿಸಿದರೆ ಏಳು ದಿನದಲ್ಲಿ ಅದರಲ್ಲಿರುವ ಬೀಜಗಳು ಮೊಳಕೆಯೊಡೆದು ಸಸ್ಯವಾಗಿ ಔಷದೀಯ ಗಿಡ ಹಾಗೂ ತರಕಾರಿಗಳ ಗಿಡಗಳನ್ನು ಬೆಳೆಸಲು ಯೋಗ್ಯವಾಗಿದೆ ಪರಿಸರ ಸ್ನೇಹಿ ಹಾಳೆಗಳ ಕ್ಯಾಲೆಂಡರ್ ಇದಾಗಿದೆ. ಕಾರ್ಯಕ್ರಮದಲ್ಲಿ ಆಗಮಿಸಿದ ಗಣ್ಯರಿಗೆ ವಾರ್ಷಿಕ ಹ್ಯಾಂಡ್ ಮೇಡ್ ಕ್ಯಾಲೆಂಡರ್ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಆಯುಷ್ ಚಿಕಿತ್ಸಾ ಶಿಬಿರದಲ್ಲಿ ಸುಮಾರು 200 ಜನರು ಇದರ ಸದುಪಯೋಗಪಡಕೊಂಡರು.

ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಮೊಕ್ತೇಸರರಾದ ತಾರಾನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್ ಬಂಟ್ವಾಳ ತಾಲೂಕು ಪಂಚಾಯತಿ ಅಧ್ಯಕ್ಷ ಚಂದ್ರಹಾಶ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಲ್ಲಾ ಪಂ.ಸದಸ್ಯ ಚಂದ್ರಪ್ರಕಾಶ್‍ಶೆಟ್ಟಿ ತುಂಬೆ, ತಾ.ಪಂ ಸದಸ್ಯ ಯಶವಂತ ಪೂಜಾರಿ, ಕರಿಯಂಗಳ ಗ್ರಾ. ಪಂ ಅಧ್ಯಕ್ಷೆ ಚಂದ್ರಾವತಿ, ಮಲ್ಲಿಕಾ ವಿಶೆಟ್ಟಿ, ವೃಂದಾ ಹಾಗೂ ಡಾ. ಮಣಿಕಾರ್ನಿಕ , ಡಾ.ಅಜಿತ್‍ನಾಥೇಂದ್ರ ಡಾ. ಮಹಮ್ಮದ್ ನೂರುಲ್ಲಾ, ಡಾ. ದೀಪ್ತಿ, ಡಾ. ಶ್ರೀ ಲಕ್ಷ್ಮೀ ,ಡಾ. ಕಾವ್ಯ, ಡಾ.ರಿಷೀಸಾಯಿಕೃಷ್ಣ ಆಯುಷ್ ಇಲಾಖೆಯ ನಿತೇಶ್ ಲಿಂಗಪ್ಪಮತ್ತಿತರರು ಇದ್ದರು. ಡಾ,ಮಣಿಕಾರ್ನಿಕ ಸ್ವಾಗತಿಸಿ ನಿರೂಪಿಸಿದರು.ಡಾ.ಅಜಿತ್‍ನಾಥೇಂದ್ರ ವಂದಿಸಿದರು.
