ಬಂಟ್ವಾಳ : ನಾಣ್ಯ ನಾಗಮಂಡಲದ ಮಂಡಲಕ್ಕೆ ಬೇಕಾದ ಬಣ್ಣಗಳನ್ನು ರಾಸಾಯನಿಕ ಮುಕ್ತ ವಾಗಿ ಕ್ಷೇತ್ರದಲ್ಲೇ ತಯಾರಿಸುವ ಪ್ರಕ್ರಿಯೆಯ ದೃವ್ಯ ಮುಹೂರ್ತಕ್ಕೆ ಚಾಲನೆ ನೀಡಲಾಯಿತು . ಪೊಳಲಿ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಯವರು ಸ್ವತಃ ಒನಕೆಯಿಂದ ಕುಟ್ಟುವ ಮೂಲಕ ಚಾಲನೆ ನೀಡಿದರು. ಶ್ರೀ ಅಷ್ಟ ಪವಿತ್ರ ನಾಗಮಂಡಲ ಪುಣ್ಯೋತ್ಸವ ಸಮಿತಿಯ ಈ ರೀತಿಯ ಚಿಂತನೆಯನ್ನು ಶ್ಲಾಘಿಸಿದರು . ಪೊಳಲಿ ಸುಬ್ರಮಣ್ಯ ತಂತ್ರಿ ಯವರ ನೇತೃತ್ವದಲ್ಲಿ ಬಣ್ಣ ತಯಾರಿಯ ಪ್ರಕ್ರಿಯೆ ನಡೆಯಿತು.ಅರಶಿನ ಮತ್ತು ಸುಣ್ಣದಿಂದ ಕುಂಕುಮ , ಅರಸಿನ ದಿಂದ ಹಳದಿ , ನೆಲ್ಲಿಕಾಯಿ ಗಿಡದ ಎಲೆಗಳಿಂದ ಹಸುರು , ಬಿಳಿ ಅಕ್ಕಿಯಿಂದ ಬಿಳಿ ಬಣ್ಣ , ಅಕ್ಕಿಯನ್ನು ಸುಟ್ಟು ಕಪ್ಪುಬಣ್ಣ ತಯಾರಿಸಲಾಗುತ್ತಿದೆ.
ಈ ಸಂದರ್ಭ ದಲ್ಲಿ ಶ್ರೀ ಅಷ್ಟ ಪವಿತ್ರ ನಾಗಮಂಡಲ ಸಮಿತಿ ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ ದೇವಸ್ಯ , ಕಾರ್ಯಾಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ ರಂಗೋಲಿ , ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಪ್ರದಾನ ಸಂಚಾಲಕರಾದ ತಾರಾನಾಥ್ ಕೊಟ್ಟಾರಿ ತೇವು,ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ , ಉಪಾಧ್ಯಕ್ಷರಾದ ರಾಧಾಕೃಷ್ಣ ತಂತ್ರಿ ಪೊಳಲಿ , ಎಂ ಆರ್ ನಾಯರ್ , ಕ್ಷೇತ್ರ ದ ಅಧ್ಯಕ್ಷರಾದ ಪೂವಪ್ಪ ಬಂಗೇರ ನಾಣ್ಯ , ರಾಮಚಂದ್ರ ಬಂಗೇರ ಭಗವತಿ , ಲೋಕನಾಥ ಆಚಾರ್ಯ , ಅರುಣ್ ಶೆಟ್ಟಿ ಪೆರ್ಲ ಬೈಲ್ ತುಂಬೆ, ಎ ಕೆ ಗಿರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು
