ಬಂಟ್ವಾಳ: ತುಳುನಾಡಿನ ಕಾರಣಿಕ ಕ್ಷೇತ್ರ, ಐತಿಹಾಸಿಕ ಸನ್ನಿಧಿಯಾದ ಶ್ರೀ ಕಲ್ಲುರ್ಟಿ ದೈವಸ್ಥಾನ ಪಣೋಲಿಬೈಲು ಕ್ಷೇತ್ರಕ್ಕೆ ಮಂಗಳೂರು ಸಹಾಯಕ ಕಮಿಷನರ್, ಕ್ಷೇತ್ರದ ಆಡಳಿತಾಧಿಕಾರಿ ಮದನ್ ಮೋಹನ್ ಸಿ ಅವರು ಭೇಟಿ ನೀಡಿ, ಶ್ರೀ ಕಲ್ಲುರ್ಟಿ ದೈವ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸ್ಥಳಿಯ ಸಜೀಪ ಮೂಡ ಗ್ರಾಮ ಪಂಚಾಯತಿ ಸದಸ್ಯ .ರಮೇಶ್ ಎಂ. ಭಂಡಾರದ ಮನೆ ಪಣೋಲಿಬೈಲ್ ಅವರು ಸಹಾಯಕ ಕಮಿಷನರ್ ಮದನ್ ಮೋಹನ್ ಸಿ ಅವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಶ್ರೀ ಕ್ಷೇತ್ರದ ಪರವಾಗಿ ಗೌರವಿಸಿದರು.

820876aa-8b71-4bcf-9014-686c66df601c
ಕಲ್ಲುರ್ಟಿ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಹಾಯಕ ಕಮಿಷನರ್ ಅವರಿಗೆ ಪ್ರಧಾನ ಅರ್ಚಕರಾದ ವಾಸುದೇವ ಮೂಲ್ಯ, ಅರ್ಚಕರಾದ ರಮೇಶ್ ಮೂಲ್ಯ. ಮೋನಪ್ಪ ಮೂಲ್ಯ ಈ ಸಂದರ್ಭದಲ್ಲಿ ಪ್ರಸಾದ ನೀಡಿ ಗೌರವಿಸಿದರು.ಇದೇ ಸಂದರ್ಭದಲ್ಲಿ ದೈವಸ್ಥಾನದ ಸಿಬ್ಬಂದಿ ವರ್ಗ ಹಾಜರಿದ್ದರು.

By suddi9

Leave a Reply

Your email address will not be published. Required fields are marked *