ಬಂಟ್ವಾಳ ; ಕಳೆದ ೨ ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ದೇವಿಕಾ(೫೧) ಅವರು ಜಿಗುಪ್ಸೆಗೊಂಡು ತೋಟದ ಬಾವಿಗೆ ಹಾರಿ ಮೃತಪಟ್ಟ ಘಟನೆ ಬುಧವಾರ ಕರಿಯಂಗಳ-ಪೊಳಲಿಯಲ್ಲಿ ನಡೆದಿದೆ. ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮಗಳ ಮದುವೆಯ ಬಳಿಕ ಮೌನಿಯಾಗಿದ್ದರು. ಜ. ೮ರ ಬೆಳಗ್ಗೆ ಅವರ ಪುತ್ರ ಎದ್ದು ನೋಡಿದಾಗ ತಾಯಿ ನಾಪತ್ತೆಯಾಗಿದ್ದು, ಹುಡುಕಾಡಿದಾಗ ಅವರ ಮೃತದೇಹ ತೋಟದ ಬಾವಿಯಲ್ಲಿ ಪತ್ತೆಯಾಗಿದೆ. ಅವರ ಪತಿ ಅನಂತಪದ್ಮನಾಭ ಉಪಾಧ್ಯಾಯ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

–

 

By Suddi9

Leave a Reply

Your email address will not be published. Required fields are marked *