ಬಂಟ್ವಾಳ : ಅಡಿಕೆ ಮರವೇರಿ ಅಡಿಕೆ ಕೀಳುತ್ತಿದ್ದ ವೇಳೆ ಅಡಿಕೆ ಮರ ಅರ್ಧದಿಂದ ತುಂಡಾಗಿ ಬಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ಅಮ್ಮುಂಜೆ ಗ್ರಾಮದ ಮೂಡಾಯಿಕೋಡಿಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಸೆಬಾಸ್ಟಿಯನ್ ವಿನ್ಸೆಂಟ್ ಸಿಕ್ವೇರಾ(೬೦) ಅವರು ತಮ್ಮ ತೋಟದಲ್ಲಿ ಅಡಿಕೆ ಕೀಳುತ್ತಿದ್ದು, ಅಡಿಕೆ ಮರ ಸಹಿತ ಕೆಳಗೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಭಾವ ಸಿರಿಲ್ ಕುವೆಲ್ಲೊ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

