ಬಂಟ್ವಾಳ: ಶಾಸಕ ಹಾಗೂ ಜಿ.ಪಂ.ಸದಸ್ಯರ ಅನುದಾನ ದಲ್ಲಿ ಮಂಜೂರಾದ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಗೆಜ್ಜೆಗಿರಿ ನಗರದಿಂದ ಮಂಜನಗುಡ್ಡೆ ಅಣ್ಣಪ್ಪ ಪಂಜುರ್ಲಿ ಮೂಲಸ್ಥಾನ ರಸ್ತೆ ಕಾಂಕ್ರೀಟೀಕರಣ, ಪೂರ್ಲಿಪ್ಪಾಡಿ ಶಿವಾಜಿನಗರ ಮರಾಟಿ ಸಮುದಾಯ ಭವನದ ತಡೆಗೋಡೆ ಕಾಮಗಾರಿ, ಗೆಜ್ಜೆಗಿರಿ ನಗರ ರಸ್ತೆಬದಿ ಕಾಂಕ್ರೀಟ್ ಚರಂಡಿ ಕಾಮಗಾರಿಗಳ ಗುದ್ದಲಿಪೂಜೆಯನ್ನು ಶಾಸಕರ ಉಪಸ್ಥಿತಿಯಲ್ಲಿ ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ ನೆರವೇಸಿದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯೆ ಲಕ್ಮೀಗೋಪಾಲ ಆಚಾರ್ಯ, ಗ್ರಾ.ಪಂ.ಅಧ್ಯಕ್ಷ ವಿಠಲ, ಸದಸ್ಯ ರಾದ ಗುಲಾಬಿ, ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಜಿಲ್ಲಾ ರೈತಮೋರ್ಚಾದ ಉಪಾಧ್ಯಕ್ಷ ಬಿ.ಕೆ.ಅಣ್ಣಿಪೂಜಾರಿ, ವಿಶ್ವಹಿಂದೂ ಪರಿಷತ್ ಆದ್ಯಕ್ಷರಾದ ಕ.ಕೃಷ್ಣಪ್ಪ ಆಚಾರ್ಯ, ಹಿರಿಯ ರಾದ ಈಶ್ವರ ಪೂಜಾರಿ ಕುರ್ಮಾನು, ಪ್ರಕಾಶ್ ಕುರ್ಮಾನು, ಬಾಬು ನಾಯ್ಕ್, ಸಂಜೀವ ಪೂಜಾರಿ, ರುಕ್ಮಯ ಸಪಲ್ಯ, ಲೋಕಯ್ಯ ಪಂಡಿತ್, ರಮೇಶ್ ಪೂಜಾರಿ , ನಾಗರತ್ನ , ಸ್ವಾತಿ, ಬೇಬಿ, ಸುನಂದಗೆಜ್ಜೆಗಿರಿ ನಗರ, ಸೌಮ್ಯಬಾಬು ನಾಯ್ಕ್ , ಚಂದ್ರಾವತಿ ಗೆಜ್ಜೆಗಿರಿನಗರ , ಹೇಮಲತಾ, ಗುತ್ತಿಗೆದಾರ ಪದ್ಮನಾಭ ವೀರಕಂಭ ಉಪಸ್ಥಿತರಿದ್ದರು.
ಬಿ.ಕೆ.ಅಣ್ಣಿಪೂಜಾರಿ ಸ್ವಾಗತಿಸಿ ವಂದಿಸಿದರು.

