ಬಂಟ್ವಾಳ: ಸಜೀಪಮುನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ 144ನೇ ವಾರ್ಡಿನ ವಿವಿದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಮಂಗಳವಾರ ಸಂಜೆ ನಡೆಯಿತು. ಮಾಜಿ ಸಚಿವ ಬಿ.ರಮನಾಥ 
ರೈ ಮರ್ತಾಜೆಯಿಂದ ವರಕಾಯಿ ಸಂಪರ್ಕಿಸುವ ಕಾಂಕ್ರೀಟ್ ರಸ್ತೆ, ವಿದ್ಯುತ್ ಪರಿವರ್ತಕ ಹಾಗೂ ಮೊಯ್ಯುದ್ದೀನ್ ಜುಮ್ಮಾ ಮಸೀದಿ ಮಲಾಯಿಬೆಟ್ಟುವಿನಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಿಂದ ನೀಡಲ್ಪಟ್ಟ 
ಹೈಮಾಸ್ಟ್ ವಿದ್ಯುತ್ ದೀಪವನ್ನು ಉದ್ಘಾಟಿಸಿದರು.
BTW_JAN8_3A

ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ವರಕಾಯಿ ಸಂಪರ್ಕದ ಕಾಂಕ್ರೀಟ್ ರಸ್ತೆ, ತಾ.ಪಂ. ಸದಸ್ಯೆ ನಸೀಮಾ ಬೇಗಂ ಉದ್ದೊಟ್ಟು- ಬಾಳಿಕೆ ಕಾಂಕ್ರೀಟ್ ರಸ್ತೆಯನ್ನು, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ ಮಲಾಯಿ ಬೆಟ್ಟು ಒಂದನೇ ಕಾಂಕ್ರೀಟಿಕೃತ ಅಡ್ಡ ರಸ್ತೆಯನ್ನು, ಸಜೀಪಮುನ್ನೂರು ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಶರೀಫ್ ಉದ್ದೊಟ್ಟು- ಕರಂದಾಡಿ ಕಾಟ್ರಸ್ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಕಳೆದ ಅಧಿಕಾರವಧಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ನಿರ್ಮಾಣ ಮೊದಲಾದ ಮೂಲಭೂತ ಅಭಿವೃದ್ದಿ ಕಾರ್ಯಗಳನ್ನು ಹೆಚ್ಚಿನ ಆದ್ಯತೆ ನೀಡಿ ನಡೆಸಲಾಗಿದೆ. ತಾಲೂಕು ಕೇಂದ್ರದಲ್ಲಿ ಮಿನಿ ವಿಧಾನ ಸೌಧ, ಕೆಎಸ್‍ಆರ್ ಟಿ ಸಿ ಬಸ್ಸು ನಿಲ್ದಾಣ, ಮೆಸ್ಕಾಂ ಕಚೇರಿ, ಶಾಶ್ವತ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ನನ್ನ ಅಧಿಕಾರವದಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಭಿವೃದ್ದಿ ಕಾರ್ಯಗಳನ್ನು ನಡೆಸಿದ್ದೇನೆ ಎಂದು ತಿಳಿಸಿದರು.

ಸುಳ್ಳು ಹೇಳಿ ತೇಜೋ ವಧೆ ಮಾಡುವುದು ಒಳ್ಳೆಯ ವ್ಯಕ್ತಿತ್ವ ಅಲ್ಲ, ತನ್ನ ಧರ್ಮವನ್ನು ಪ್ರೀತಿಸುವ ಜೊತೆಗೆ ಇತರ ಧರ್ಮವನ್ನು ಗೌರವಿಸುವ ವ್ಯಕ್ತಿತ್ವ ನಮ್ಮದಾಗಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜಿಲ್ಲಾ ಪಂಚಾಯಿತಿಗೆ ಸೀಮಿತ ಅನುದಾನವಿದ್ದು ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ಅಭಿವೃದ್ದಿ ಕಾರ್ಯಗಳನ್ನು ಮಾಡಬೇಕಾಗಿದೆ. ನನ್ನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಅಭಿವೃದ್ದಿ ಮಾಡಲಾಗದಿದ್ದರೂ ಅತೀ ಹೆಚ್ಚು ಕೆಲಸ ಮಾಡಿದ ತೃಪ್ತಿ ಇದೆ.

BTW_JAN8_3B

ಮುಂದಿನ ದಿನಗಳಲ್ಲಿ ಸಜಿಪ ಮುನ್ನೂರಿನ ಏಳಿಗೆಗಾಗಿ ಶ್ರಮಿಸುವುದಾಗಿ ತಿಳಿಸಿದರು. ಸಭಾ ವೇದಿಕೆಯಲ್ಲಿ ಸಜೀಪಮುನ್ನೂರು ಗ್ರಾಮದ ಅಭುವೃದ್ದಿ ಕಾರ್ಯಗಳಿಗೆ ಶ್ರಮಿಸಿದ ಪಂಚಾಯಿತಿ ಮಾಜಿ ಸದಸ್ಯ ಯೂಸುಫ್ ಕರಂದಾಡಿ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ಕು ಮಾರ್ ಶೆಟ್ಟಿ, ಪ್ರಗತಿಪರ ಕೃಷಿಕ ಸುಬ್ರಹ್ಮಣ್ಯ ಭಟ್, ಗುತ್ತಿಗೆದಾರ ಇಕ್ಬಾಲ್ ಪಿ.ಎಸ್., ಮಸೀದಿ ಅಧ್ಯಕ್ಷ ಬದ್ರುದ್ದೀನ್, ಮಾಜಿ ಅಧ್ಯಕ್ಷ ಬಾವಾಕ್ಕ, ಅಲ್ ಆಮೀನ್ ಸಂಘ ಮಲಾಯಿಬೆಟ್ಟು ಇದರ ಅಧ್ಯಕ್ಷ ಚೆರ್ರಿಮೋನು, ಸಜೀಪಮುನ್ನೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಪರಮೇಶ್ವರ ಮೂಲ್ಯ, ತಾ.ಪಂ. ಮಾಜಿ ಸದಸ್ಯ ಶರೀಫ್, ಗ್ರಾ.ಪಂ.ಸದಸ್ಯರಾದ ಜನಾರ್ದನ ಮೂಲ್ಯ, ಹೇಮಾವತಿ, ಮಲಾಯಿಬೆಟ್ಟು ಕಿ.ಪ್ರಾ. ಶಾಲೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಮಲಾಯಿಬೆಟ್ಟು, ಎಸ್‍ಕೆಎಸ್‍ಎಸ್‍ಎಫ್ ಮಲಾಯಿಬೆಟ್ಟು ಘಟಕದ ಅಧ್ಯಕ್ಷ ಇಕ್ಬಾಲ್ಪ ಡ್ಪು ವೇದಿಕೆಯಲ್ಲಿ ಉಪಸ್ಥಿರಿದ್ದರು.

ಪ್ರಮುಖರಾದ ಗಂಗಾಧರ ಭಂಡಾರಿ, ಮನೋಜ್ ಆಳ್ವ, ವಿಶ್ವನಾಥ ಮರ್ತಾಜೆ, ಕೆ. ಮಹ್ಮಮದ್ ಉದ್ದೊಟ್ಟು, ಸುಂದರ ಕರಂದಾಡಿ, ಬದ್ರಿಯಾ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ರ ಹಿಮಾನ್, ಇಸುಬು ವರ್ಕಾಡಿ, ಕರೀಂ ತನ್ನಚ್ಚಿಲ್, ಗಣೇಶ್ನಾ ಯ್ಕ್, ರಾಮಣ್ಣ, ಕುಮಾರ್ ವರಕಾಯಿ, ಮಧುಸೂದನ್ಗುಂ ಡಿಕೆರೆ, ಮೋನಪ್ಪ ಕರಂದಾಡಿ ಮೊದಲಾದವರು ಹಾಜರಿದ್ದರು. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಯೂಸುಫ್ ಕರಂದಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಬೀರ್ವಂ ದಿಸಿದರು. ಇರಾ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ಇ ರಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *